Kannada NewsKarnataka NewsLatest

ಗ್ರಾಮೀಣ ಕ್ಷೇತ್ರದ 50 ಹಳ್ಳಿಗಳಿಗೆ ಜಿಮ್, ಕ್ರೀಡಾ ಸಾಮಗ್ರಿ ವಿತರಣೆ – ಚನ್ನರಾಜ ಹಟ್ಟಿಹೊಳಿ ಮಾಹಿತಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರ ನಿಧಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ 50 ಹಳ್ಳಿಗಳಿಗೆ ಇದೇ ವರ್ಷ ಜಿಮ್ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೆ 20 ಹಳ್ಳಿಗಳಿಗೆ ವಿತರಣೆ ಪೂರ್ಣಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.

ಶನಿವಾರ ಶಾಸಕ ಗೃಹ ಕಚೇರಿಯಲ್ಲಿ 10 ಗ್ರಾಮಗಳಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.  ನಗರ ಪ್ರದೇಶಗಳಲ್ಲಿ ಸಿಗುವ ಸೌಲಭ್ಯಗಳು ಗ್ರಾಮೀಣ ಪ್ರದೇಶದ ಯುವಕರಿಗೆ, ಮಕ್ಕಳಿಗೆ ಸಿಗಬೇಕೆನ್ನುವ ಉದ್ದೇಶದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಈ ಯೋಜನೆ ಹಾಕಿಕೊಂಡಿದ್ದಾರೆ. ತನ್ಮೂಲಕ ಗ್ರಾಮೀಣ ಜನತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು.

ಕ್ಷೇತ್ರದಲ್ಲಿ ನಾಗರಿಕ ಸೌಲಭ್ಯಗಳ ಅಭಿವೃದ್ಧಿಯ ಜೊತೆಗೆ, ಕ್ರೀಡೆ, ಶಿಕ್ಷಣ ಸೇರಿದಂತೆ ಸರ್ವ ಎಲ್ಲ ವಿಧದಲ್ಲೂ ಕ್ಷೇತ್ರ ಮುಂದೆ ಬರಬೆಕೆನ್ನುವ ಧ್ಯೇಯ ಇಟ್ಟುಕೊಂಡು ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಹ ಜನರು ಅವರಿಗೆ ಎಲ್ಲ ರೀತಿಯ ಸಹಕಾರ, ಪ್ರೇತ್ಸಾಹ, ಬೆಂಬಲ ನೀಡಬೇಕು ಎಂದು ಚನ್ನರಾಜ ಹಟ್ಟಿಹೊಳಿ ಕೋರಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಂಗರಗಾ, ಬೆಳಗುಂದಿ, ದೇಸೂರ, ಸಂತಿ ಬಸ್ತವಾಡ, ಉಚಗಾಂವ, ಕೆಕೆ ಕೊಪ್ಪ, ಬೆಂಡಿಗೇರಿ, ಕಂಗ್ರಾಳಿ ಬಿ ಕೆ, ಹಲಗಾ, ಬಸ್ತವಾಡ ಗ್ರಾಮಗಳಿಗೆ ಶಾಸಕರ ಅನುದಾನದಲ್ಲಿ (MLA Fund) ಸಾರ್ವಜನಿಕ ಜಿಮ್ ಉಪಕರಣ ಮತ್ತು ಕ್ರೀಡಾ ಸಾಮಗ್ರಿಗಳನ್ನು ಆಯಾ ಗ್ರಾಮಗಳ ಮುಖಂಡರ, ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಸ್ತಾಂತರಿಸಿದರು.
ಈ ಸಮಯದಲ್ಲಿ ಆಯಾ ಗ್ರಾಮಗಳ ಹಿರಿಯರು, ಶಾಲಾ ಸಿಬ್ಬಂದಿ ವರ್ಗದವರು, ಯುವರಾಜ ಕದಂ, ಯಲ್ಲಪ್ಪ ಡೇಕೋಳ್ಕರ, ಸಾತೇರಿ‌‌ ಬೆಳವಟ್ಕರ್, ಜಯರಾಂ ಪಾಟೀಲ, ಶಿವಾಜಿ ಬೋಕಡೆ, ಅನಿಲ ಪಾವಸೆ, ದತ್ತಾ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

 

 

https://pragati.taskdun.com/sarva-dharma-spirituality-conference-held-at-arudha-mutt-chikmunavalli/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button