ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಂತರರಾಷ್ಟ್ರೀಯ ಕ್ಯಾನ್ಸರ ದಿನಾಚರಣೆಯನ್ನು ಬೆಳಗಾವಿಯ ಹಂಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೆಡಿಕಲ್ ವಿಂಗ್ ಆಫ್ ಬ್ರಹ್ಮಾ ಕುಮಾರಿಸ್ ಮಹಾಂತೇಶ್ ನಗರದ ವತಿಯಿಂದ ಆಯೋಜಿಸಲಾಗಿತ್ತು.
ಅತಿಥಿಗಳು ಸಸ್ಯಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಡಾ ಹಂಸ ಪದ್ಮಜಾ ಹಂಜಿ ಇವರು ಸ್ವಾಗತ ಕೋರಿದರು. ಬ್ರಹ್ಮಾ ಕುಮಾರಿ ಡಾ||ಸಂಗೀತಾ ಬೆಳಗಾವಿಮಠ. ಪ್ರೊಫೆಸರ್ ಶೇಖ್ ಹೋಮಿಯೋಪಥಿ ಕಾಲೇಜ್, ಇವರು ರಾಜಯೋಗದಿಂದ ಮನ ಮತ್ತು ಶರೀರ ಹೇಗೆ ಆರೋಗ್ಯವಾಗಿ ಇಡಬಹುದು ಎಂದು ತಿಳಿಸಿದರು. ಯಾವ ರೀತಿ ವಿಚಾರವು ಅವು ಶರೀರದ ಮೇಲೆ ಪ್ರಭಾವ ಬೀರುತ್ತದೆ. ಖುಷಿ ನಮ್ಮ ಪಚನ ಕ್ರಿಯೆಗೆ ಸಂಬಂಧಿಸಿದಂತೆ, ಶಾಂತಿ ನಮ್ಮ ಶ್ವಾಸ ಕೋಶಕ್ಕೆ ಸಂಬಂಧ ಹೊಂದಿದೆ ಎಂದು ವಿವರವಾಗಿ ಮಹತ್ವ ತಿಳಿಸಿದರು.
ಬಿ. ಕೆ. ರೂಪಾ ಅಕ್ಕನವರು ಸಂಸ್ಥೆ ಪರಿಚಯ ನೀಡಿದರು. ಡಾಕ್ಟರ್ ಮುಕ್ತಾ, ಸ್ತ್ರೀರೋಗ ತಜ್ಞ. ಕೆ. ಎಲ್. ಇ. ಇವರು ಸ್ತ್ರೀ ಯರಲ್ಲಿ ಯಾವ ರೀತಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಏನು ಮಾಡಬಹುದು ಎಂದು ತಿಳಿಸಿದರು.
ಡಾಕ್ಟರ್ ಅಭಿನಂದನ್ ಹಂಜಿ ಇವರು ತಮ್ಮ ವಿಚಾರ ಹೇಳುತ್ತಾ ಶರೀರ ತನ್ನಲ್ಲೇ ಆದ ಬದಲಾವಣೆ ತೋರಿಸುತ್ತದೆ. ಅದನ್ನು ಅರಿತು ಕೂಡಲೇ ಉಪಚಾರ ಮಾಡಿ ಎಂದರು.
ಬಿ. ಕೆ. ಅನಿತಾ ಅಕ್ಕ ಮೆಡಿಟೇಶನ್ ಮಾಡಿಸಿದರು. ಈ ವೇಳೆ ಕ್ಯಾನ್ಸರ್ ನಿಂದ ಹೊರ ಬಂದ ವರಿಗೆ ಸನ್ಮಾನಿಸಲಾಯಿತು.
ಆಸ್ಪತ್ರೆ ಸಿಬ್ಬಂದಿ ಮತ್ತು ಅನೇಕ ರೋಗಿಗಳು ಮುಂತಾದವರು ಭಾಗವಹಿಸಿದ್ದರು.
https://pragati.taskdun.com/jarakiholihakkupatra-vitaranegokaka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ