ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಕಿತ್ತೂರು ಕರ್ನಾಟಕದ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಇದಕ್ಕಾಗಿ ಈ ಭಾಗದ ಶಾಸಕರು, ಸಚಿವರು ಮುಖ್ಯಮಂತ್ರಿಗಳ ಮನವಿ ಮಾಡಬೇಕು ಎಂದು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶ್ರೀಗಳು, ರಾಜ್ಯದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕಾರ್ಯಕ್ಷಮತೆ, ನಾಡಿಗೆ ನೀಡಿದ ಕೊಡುಗೆಗಳು ಶ್ಲಾಘನಾರ್ಹ ಎಂದಿದ್ದಾರೆ.
ಉತ್ತರ ಕರ್ನಾಟಕವನ್ನು ‘ಕಿತ್ತೂರು ಕರ್ನಾಟಕ’ ಎಂದು ಘೋಷಿಸುವುದರಿಂದಿಗೆ ಮುಖ್ಯಮಂತ್ರಿಗಳು ಈ ಭಾಗದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸಮಾಧಾನಕರವಾಗಿವೆ. ಆದರೆ ಕಿತ್ತೂರ ಕರ್ನಾಟಕದ ಪರಿಪೂರ್ಣ ಅಭಿವೃದ್ಧಿಗೆ ಸರಕಾರದ ಕೊಡುಗೆ ಸಾಲದು. ಬರುವ ಬಜೆಟ್ ನಲ್ಲಿ ಹಲವಾರು ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಬೊಮ್ಮಾಯಿ ಸರಕಾರ ಗಮನ ಹರಿಸಬೇಕು. ಅಲ್ಲದೆ, ಬರುವ ಬಜೆಟ್ ನಲ್ಲಿ ಕಿತ್ತೂರು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಹಳೆಯ ಯೋಜನೆಗಳ ಜೊತೆಗೆ ಹೊಸ ಯೋಜನೆಗಳನ್ನು ಘೋಷಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದಿನ ಬಹುತೇಕ ಸರಕಾರಗಳು ಈ ಭಾಗವನ್ನು ಕಡೆಗಣಿಸುತ್ತ ಬಂದಿವೆ. ಇದರಿಂದಾಗಿ ಕೆಲ ದಶಕಗಳಿಂದೀಚೆ ಜನತೆಯಿಂದ ಪ್ರತ್ಯೇಕತೆಯ ಕೇಳಿ ಬರುತ್ತಿದೆ. ಈ ಕೂಗನ್ನು ಕೇಳದಂತೆ ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಬೊಮ್ಮಾಯಿ ಅವರು ಮಂಡಿಸಲಿರುವ ಬಜೆಟ್ ನಲ್ಲಿ ಆದ್ಯತೆ ನೀಡಲಿ. ಆ ಮೂಲಕ ಈ ಭಾಗದ ಜನರ ಆಶೋತ್ತರಕ್ಕೆ ಸರಕಾರ ಸ್ಪಂದಿಸಲಿ ಎಂದು ಶ್ರೀಗಳು ಒತ್ತಾಯಿಸಿದ್ದಾರೆ.
https://pragati.taskdun.com/prime-minister-modi-met-with-many-celebrities-including-actor-yash-rishabh-shetty/
ಕುಸ್ತಿ ಕ್ರೀಡೆಯ ವೈಭವ ಮರುಕಳಿಸುವಂತಾಗಲಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ
https://pragati.taskdun.com/may-the-glory-of-wrestling-sport-be-restored-mla-lakshmi-hebbalakkara/
ಕ್ರೂಜರ್, ದ್ವಿಚಕ್ರ ವಾಹನಗಳ ಮಧ್ಯೆ ಸರಣಿ ಅಪಘಾತ; ಇಬ್ಬರು ಯುವಕರ ಸಾವು
https://pragati.taskdun.com/serial-accident-between-cruiser-and-two-wheelers-both-died/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ