Latest

*ರಾಮನಗರದ ರಾಮಮಂದಿರ ಆಗೇ ಆಗುತ್ತದೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ರಾಮನಗರದ ರಾಮ ದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಆಗೇ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಿಗ್ಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

Home add -Advt

ರಾಮದೇವರ ಬೆಟ್ಟ ಐತಿಹಾಸಿಕವಾದುದು. ಹೊಸ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಹಲವಾರು ಜನರ ಇಚ್ಛೆಯಾಗಿತ್ತು. ನನ್ನ ಪ್ರಕಾರ ಯಾರೂ ಇದಕ್ಕೆ ವಿರೋಧ ಮಾಡುವುದಿಲ್ಲ. ವಿರೋಧ ಮಾಡುವವರು ವಿರೋಧಿಸಲಿ. ನನ್ನ ತಕಾರಾರಿಲ್ಲ ಎಂದರು.

ಮಾತಿಗೆ ತಪ್ಪಿದ ಮಗ
ಕಾಂಗ್ರೆಸ್ ಅವರು ಇಷ್ಟು ದಿನ ಜನರ ಕಿವಿಗೆ ಹೂವಿಟ್ಟಿದ್ದರು. ಸಿದ್ದರಾಮಯ್ಯ ಅವರು ಮಾತಿಗೆ ತಪ್ಪಿದ ಮಗ. ಬಜೆಟ್ ನಲ್ಲಿ ಹೇಳಿದ್ದ ಯಾವುದನ್ನೂ ಅನುಷ್ಠಾನ ಮಾಡಿಲ್ಲ. ಮೊದಲು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಆಮೇಲೆ ಅದನ್ನು 4 ಕೆಜಿಗೆ ಇಳಿಸಿದರು. ಚುನಾವಣೆ ಸಮಯದಲ್ಲಿ 7 ಕೆಜಿಗೆ ಏರಿಸಿದರು. ಹೀಗೆ ಜನರನ್ನು ಯಾಮಾರಿಸಿದ್ದಾರೆ. ಅವರಿಗೆ ಜನ ಶಾಶ್ವತವಾಗಿ ಹೂವಿಡುವ ಕೆಲಸವಾಗುತ್ತದೆ ಎಂದರು.

*ಡಿ.ಕೆ.ರವಿ ವಿಚಾರ ಪ್ರಸ್ತಾಪಿಸಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತಷ್ಟು ಪ್ರಶ್ನೆ ಮುಂದಿಟ್ಟ ಡಿ.ರೂಪಾ*

https://pragati.taskdun.com/d-roopareactionrohini-sindhuri/

Related Articles

Back to top button