ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿಯ ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಮ್ ಬಿ ಎ ಮತ್ತು ಎಮ್ ಸಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 3 ದಿನಗಳ ಪ್ರವೇಶ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಡಾ. ಅಮರ ಪಶುಪತಿಮಠ, ಪ್ರಾಚಾರ್ಯರು, ಕೆಎಲ್‌ಇ ಬಿಕೆ ಬಿಬಿಎ ಮತ್ತು ಬಿಸಿಎ ಕಾಲೇಜು, ಚಿಕ್ಕೋಡಿ ಮಾತನಾಡಿ, ಸಮಾಜದಲ್ಲಿ ಒಳ್ಳೇಯ ಸ್ಥಾನ ಪಡೆದುಕೊಳ್ಳಬೇಕೆಂದರೆ ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳುವ ಕಲೆ ಬೇಕು ಅದುವೇ ಸಂವಹನ ಕಲೆ. ಅದನ್ನು ಬೆಳೆಸಿಕೊಳ್ಳಿ ಎಂದರು. ಎಮ್ ಬಿ ಎ ಮತ್ತು ಎಮ್ ಸಿ ಎ ಎಂಬುದು ಪ್ರಾಯೋಗಿಕ ಕಲಿಕೆ. ನೀವು ಎಷ್ಟು ಸಕ್ರೀಯರಾಗಿ ವಿದ್ಯಾಭ್ಯಾಸದಲ್ಲಿ ಭಾಗವಸುತ್ತಿರಿ ಎಂಬುದು ಮುಖ್ಯ. ಈ ಮಹಾವಿದ್ಯಾಲಯದಲ್ಲಿ 20 ಕ್ಕೂ ಹೆಚ್ಚು ಪ್ರಾಧ್ಯಾಪಕರು ಡಾಕ್ಟರೇಟಗಳು, ಸುಸಜ್ಜಿತ ಗ್ರಂಥಾಲಯ, ಹಸಿರು ಪರಿಸರ, ಆಟೋಟಗಳಿಗೆ ಕ್ರಿಡಾಂಗಣ, ಒಟ್ಟಿನಲ್ಲಿ ಹೇಳುವದಾದರೆ, ಈ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿ ಒಂದು ಒಳ್ಳೇಯ ವಾತಾವರಣವಿದೆ.
ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ, ಅವಕಾಶಗಳನ್ನ ಯಾರು ಕರೆದು ಕೊಡುವದಿಲ್ಲ, ನಿಮ್ಮ ಹತ್ತಿರ ಬರುತ್ತಿದ್ದಂತೆ ವಿಫಲತೆಗೆ ಅಂಜದೇ ಅವುಗಳ ಸದ್ಬಳಕೆ ಮಾಡಿಕೊಳ್ಳುವತ್ತ ಕ್ರಮ ಕೈಗೊಳ್ಳಿ ಎಂದರು. ಉದ್ಯಮದಲ್ಲಿ ಒಂದು ಟೀಮನಲ್ಲಿ ನಾವು ಯಾವ ರೀತಿ ಕಾರ್ಯ ನಿರ್ವಹಿಸುತ್ತೇವೆಂಬುದು ಮುಖ್ಯ. ಈ ಗುಣ ಬೆಳೆಸಿಕೊಳ್ಳಬೇಕೆಂದರೆ ಬೇರೆ-ಬೇರೆ ಚಟುವಟುಕೆಗಳಲ್ಲಿ ಭಾಗವಹಿಸಿ ಎಂದರು. ಕೆ. ಎಲ್. ಇ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ನಮ್ಮ ಮಹಾವಿದ್ಯಾಲಯದಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ವಿದ್ಯಾರ್ಥಿಗಳಾದ ಕು. ಅಮರ ಕುಂಬಾರ, ಸಾಹಿಲ್ ಲೊಖಂಡೆ, ದೀಪಿಕಾ ಶೆಟ್ಟಿ ತಮ್ಮ ಅನಿಸಿಕೆ ಹಂಚಿಕೊಂಡರು. ಕು. ಪ್ರೀಯಾ ಕುಲಕರ್ಣಿ ತಂಡ ಸ್ವಾಗತ ಗೀತೆ ಹಾಡಿದರು.
ಡಾ. ಸಂಜಯ ಹನಗಂಡಿ ಸ್ವಾಗತಿಸಿದರು. ಕು. ಶಿವಾನಂದ ಸನದಿ ಅಥಿತಿಯನ್ನು ಪರಿಚಯಿಸಿದರು. ಕು. ವಿಜಯಲಕ್ಷಿö್ಮ ಮತ್ತು ಕು. ನಿಮಿಶಾ ಪಾಟೀಲ ನಿರೂಪಿಸಿದರು. ಡಾ. ಪ್ರವೀಣ ಪಾಟೀಲ ವಂದಿಸಿದರು.
ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಸಂಯೋಜಕರಾದ ಪ್ರೊ. ಸತೀಶ ಭೋಜನ್ನವರ, ವಿಭಾಗ ಮುಖ್ಯಸ್ಥರಾದ ಡಾ. ಮಹಾಂತಯ್ಯ ಮಠಪತಿ, ಪ್ರೊ. ಅಶ್ವಿನಿ ಗವಳಿ, ಡಾ. ಆರ್. ಕೆ. ಪಾಟೀಲ, ಪ್ರೊ. ಬಸವರಾಜ ಚೌಕಿಮಠ, ಪ್ರೊ. ಪ್ರದೀಪ ಹೊದ್ಲೂರ, ಪ್ರೊ. ಸುನೀಲ ಶಿಂದೆ, ಪ್ರೊ. ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.
*BREAKING: ಕಿತ್ತಾಟ ಪ್ರಕರಣ; ಮೂವರು ಅಧಿಕಾರಿಗಳ ತಲೆದಂಡ; ಡಿ.ರೂಪಾ, ರೋಹಿಣಿಗೆ ಸ್ಥಳ ನಿಯೋಜಿಸದೇ ವರ್ಗಾವಣೆ*
https://pragati.taskdun.com/d-rooparohini-sindhurimunish-moudgiltransfer/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ