ಪಂಚಮಹಾಭೂತಗಳು ಇಲ್ಲದೇ ಯಾರೂ ಬದುಕುವುದಕ್ಕೆ ಸಾಧ್ಯವಿಲ್ಲ – ರಾಜ್ಯಪಾಲ ತಾವರಚಂದ್ ಗೆಹ್ಲೋಟ್

ಸಿದ್ದೇಶ್ವರ ಸ್ವಾಮಿಜೀ ವೇದಿಕೆ ಕನ್ಹೇರಿಮಠ, (ಸಿದ್ದಗೀರಿ ಕೊಲ್ಹಾಪುರ) : 
ಆಕಾಶ, ನೀರು, ತೇಜಸ್ಸು, ವಾಯು, ಭೂಮಿ ಸಂರಕ್ಷಣೆಯ ಬಗ್ಗೆ ಜಾಗೃತಗೊಳಿಸುವ ಕೆಲಸ ಪಠ್ಯಪುಸ್ತಕದ ರೂಪದಲ್ಲಿ ಹೊರಬರಲಿ ಎಂದು ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಹೇಳಿದರು.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿಯ ಸಿದ್ದಗಿರಿ ಮಠದ ಆವರಣದಲ್ಲಿ ಫೆ ೧೯ ರಿಂದ ೨೬ರವರೆಗೆ ನಡೆಯುತ್ತಿರುವ ಪಂಚಮಹಾಭೂತ ಲೋಕೋತ್ಸವದ ೫ನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಭಾರತ ದೇಶದಲ್ಲಿ ಪಂಚಮಹಾಭೂತಗಳ ರಕ್ಷಣೆಯಲ್ಲಿ ಮಹಾಪುರುಷರು, ಸಂತರು, ಶರಣರು ತೊಡಗಿಸಿಕೋಂಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತ ಪಡಿಸಿರುವದರಿಂದ ಇಂದು ಅಂತರಾಷ್ಟ್ರೀಯ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.

ಪ್ರದಾನಿ ಮೋದಿ ಅವರು ಮನಸ್ಸು ಮಾಡಿದ್ದಲ್ಲಿ ಜಗತ್ತಿನ ಗಮನವನ್ನು ಪಂಚಮಹಾಭೂತಗಳ ರಕ್ಷಣೆಯ ಕುರಿತು ಸೆಳೆಯಲು ಸಾಧ್ಯವಿದೆ. ಜಲ್ ನಹೀ ತೋ ಕಲ್ ನಹೀ… ಅಂದ್ರೆ ನೀರು ಇಲ್ಲದೇ ಇದ್ದರೆ ನಾಳೆಗಳು ಇಲ್ಲ.. ಹಾಗೇನೇ ಏನೂ ಇಲ್ಲವೆಂದರೂ ಬದುಕುಬಹುದು. ಆದ್ರೆ ಪಂಚಮಹಾಭೂತಗಳು ಇಲ್ಲದೇ ಯಾರೂ ಬದುಕುವುದಕ್ಕೆ ಸಾಧ್ಯವಿಲ್ಲ ಎಂಬುವುದನ್ನು ಕನೇರಿ ಮಠದಲ್ಲಿ ಹಮ್ಮಿಕೊಂಡ ಪಂಚಮಹಾಭೂತ ಲೋಕೋಕೋತ್ಸವ ಕಾರ್ಯಕ್ರಮದಿಂದ ತಿಳಿದುಕೊಳ್ಳಬಹುದಾಗಿದೆ. ಏಳು ದಿನಗಳ ನಡೆಯುವ ಈ ಕಾರ್ಯಕ್ರಮದ ವಿಚಾರಗಳನ್ನು ಒಟ್ಟು ಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನರಿಗೆ ತಲುಪಿಸಬೇಕಿದೆ ಎಂದರು.


ಕನೇರಿ ಸ್ವಾಮಿಜೀಗಳು ರಾಜ್ಯಪಾಲರನ್ನು ಸನ್ಮಾನಿಸಿ ಗೌರವಿಸಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಮಾತನಾಡಿ, ” ದಿನಕ್ಕೊಂದು ಪಂಚಮಹಾಭೂತಗಳ ರಕ್ಷಣೆಯ ಕುರಿತು ಕನ್ಹೇರಿ ಮಠದಲ್ಲಿ ನಡೆಯುತ್ತಿರುವ ಪಂಚಮಹಾಭೂತಗಳ ಲೋಕೋತ್ಸವದಲ್ಲಿ ತಿಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಮುಂದೊಂದು ದಿನ ಭಾರತ ಈ ರೀತಿಯ ವಿನೂತನ ಕಾರ್ಯಕ್ರಮಗಳಿಂದ ವಿಶ್ವ ಗುರುವಾಗುದರಲ್ಲಿ ಭಾರತ ಹೆಜ್ಜೆ ಇಡುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಪಂಚಮಹಾಭೂತಗಳ ರಕ್ಷಣೆಯ ಕುರಿತು ಸಂತ ಮಹಾಂತರ ಮಾರ್ಗದರ್ಶನ ಅವಶ್ಯವಿದೆ” ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಮಾತನಾಡುತ್ತಾ, ” ಪಂಚಮಹಾಭೂತಗಳ ಕಲ್ಪನೆಯನ್ನು ವಿಶ್ವಕ್ಕೆ ಕೊಟ್ಟಿದ್ದು ಭಾರತ. ಜಗತ್ತು ಸೃಷ್ಠಿಯಾಗಿದ್ದೇ ಈ ಪಂಚಮಹಾಭೂತಗಳಿಂದ. ಪರಿಸರ ಕಲುಷಿತಗೊಳಿಸುವಲ್ಲಿಯ ಆಸಕ್ತಿ ರಕ್ಷಣೆಯಲ್ಲಿ ಇಲ್ಲದಿರುವುದು ವಿಪರ್ಯಾಸವಾಗಿದೆ. ಆದ್ರೆ ಕನ್ನೇರಿ ಸಿದ್ದಗಿರಿ ಮಠ ಇಂತಹ ವಿನೂತನ ಕಾರ್ಯಕ್ರಮಗಳ ಕಲ್ಪನೆಗೆ ಸದಾ ಸಿದ್ಧವಾಗಿದೆ ಎಂಬುವುದಕ್ಕೆ ಪ್ರತಿ ದಿನವೂ ೪-೫ ಲಕ್ಷ ಜನ ಸೇರುತ್ತಿರುವ ಏಳು ದಿನಗಳ ಲೋಕೋತ್ಸವ ಕಾರ್ಯಕ್ರಮವೇ ಸಾಕ್ಷಿಯಾಗಿದೆ” ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸಂಚಾಲಕ ಬಯ್ಯಾಜಿ ಜೋಶಿ ಅವರು ಮಾತನಾಡಿ, ಪಂಚಮಹಾಭೂತಗಳ ರಕ್ಷಣೆಯ ಜವಾಬ್ದಾರಿಯು ಭಾರತ ದೇಶಕ್ಕೆ ಮಾತ್ರವಲ್ಲ. ಇಡೀ ಜಗತ್ತಿಗೆ ಅವಶ್ಯಕವಾಗಿದೆ. ಹಾಗಾಗಿ ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ರಕ್ಷಣೆಯಲ್ಲಿ ತೊಡಗಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.

ಕನ್ಹೇರಿ ಸಿದ್ದಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮುಂತಾದವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

ಸಿದ್ದೇಶ್ವರ ಸ್ವಾಮೀಜಿಯವರ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ರಾಜಸ್ತಾನ ಸೇರಿದಂತೆ ಭಾರತದ ೨೬ ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಸಂತರು, ಶರಣರು, ಸ್ವಾಮೀಜಿಗಳು ಸುಭಾಷ ದೇಶಮುಖ, ಡಾ.ಆರ್.ಕೆ.ಕಾಮತ,ಡಾ.ಪಿ.ಎಲ್.ಪಾಟೀಲ ಉಪಸ್ಥಿತರಿದ್ದರು.

ಬಿಜೆಪಿ ಚುನಾವಣೆ ಉಸ್ತುವಾರಿ ಕಾರ್ಯ ಶುರು: ಬೊಮ್ಮಾಯಿ ಅಪ್ಪಿ, ಮುದ್ದಾಡಿದ ಧರ್ಮೇಂದ್ರ ಪ್ರಧಾನ್

https://pragati.taskdun.com/bjp-election-in-charge-work-begins-dharmendra-pradhan-hugs-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button