Kannada NewsKarnataka News

ಅಪಘಾತಕ್ಕೆ ಬಲಿಯಾದವರೆಲ್ಲ ಅಗ್ನಿ ವೀರ್ ನನ್ನು ಬೀಳ್ಕೊಡಲು ಹೊರಟವರು

ಪ್ರಗತಿವಾಹಿನಿ ಸುದ್ದಿ, ಧಾರವಾಡ : ಧಾರವಾಡ ಬಳಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತಕ್ಕೆ ಬಲಿಯಾದವರೆಲ್ಲ ಅಗ್ನಿವೀರ್ ಸೇವೆಗೆ ಆಯ್ಕೆಯಾಗಿರುವ ಯುವಕನನ್ನು ಹೈದರಾಬಾದ್ ಗೆ ಬೀಳ್ಕೊಡಲು ಹೊರಟಿದ್ದವರಾಗಿದ್ದರು.

ಕಿತ್ತೂರು ತಾಲೂಕಿನ ಔರಾದಿಯ ಮಂಜುನಾಥ ಮುದ್ದೋಜಿ (23) ಅಗ್ನಿವೀರ್ ಸೇವೆಗೆ ಆಯ್ಕೆಯಾಗಿದ್ದ. ಆತ ಹೈದರಾಬಾದ್ ನಲ್ಲಿ ಕೆಲಸಕ್ಕೆ ಸೇರಬೇಕಿತ್ತು. ಅದಕ್ಕಾಗಿ ರೈಲಿನ ಮೂಲಕ ಹೋಗುವವನಿದ್ದ. ಆತನನ್ನು ರೈಲು ಹತ್ತಿಸಲೆಂದು ಸ್ನೇಹಿತರು ಹಾಗೂ ಕುಟುಂಬದವರು ಖುಷಿ ಖುಷಿಯಿಂದ ಹೊರಟಿದ್ದರು.

Home add -Advt

ಆದರೆ ಧಾರವಾಡದ ತೇಗೂರು ಬಳಿ ಮುಂದೆ ಹೊಗುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಹಾಗೂ ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವಿಗೀಡಾದರು. ಮಹಾಂತೇಶ ಮುದ್ದೋಜಿ (41), ನಾಗಪ್ಪ ಮುದ್ದೋಜಿ (289), ಬಸವರಾಜ ನರಗುಂದ (34), ಶ್ರೀಕುಮಾರ (6) ಹಾಗೂ ಪಾದಚಾರಿ ಈರಣ್ಣ ಸಾವಿಗೀಡಾದವರು.

ಈ ಘಟನೆಯಲ್ಲಿ ಮಂಜುನಾಥ ಸೇರಿದಂತೆ ಇನ್ನೂ ನಾಲ್ವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಧಿಯ ಅಟ್ಟಹಾಸ ಕ್ಷಣ ಮಾತ್ರದಲ್ಲಿ ಎಲ್ಲಿಗೆ ಹೋಗಬೇಕಿದ್ದವರನ್ನು ಎಲ್ಲಿಗೆ ಕರೆದೊಯ್ದು ಬಿಟ್ಟಿತು. ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

 

*ಭೀಕರ ಅಪಘಾತ; ಐವರ ದುರ್ಮರಣ*

https://pragati.taskdun.com/accidentcar-lorry5-people-death/

Related Articles

Back to top button