ಪ್ರಗತಿವಾಹಿನಿ ಸುದ್ದಿ, ಪುಣೆ: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ. ದೇವಿ ಸಿಂಗ್ ರಾಮ್ ಸಿಂಗ್ ಶೇಖಾವತ್ (89) ಇಂದು ನಿಧನರಾದರು.
ಎರಡು ದಿನಗಳ ಹಿಂದಷ್ಟೇ ಅವರು ಹೃದಯಾಘಾತಕ್ಕೆ ಒಳಗಾಗಿ ಪುಣೆಯ ಕೆಇಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರ ಅಂತ್ಯಸಂಸ್ಕಾರ ಇಂದು ಸಂಜೆ 6 ಗಂಟೆಗೆ ಪುಣೆಯಲ್ಲಿ ನಡೆಯಲಿದೆ.
ರಸಾಯನಶಾಸ್ತ್ರ ಉಪನ್ಯಾಸಕರಾಗಿದ್ದ ದೇವಿಸಿಂಗ್ , 1965ರ ಜುಲೈ 7ರಂದು ಪ್ರತಿಭಾ ಪಾಟೀಲ್ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಪುತ್ರಿ ಹಾಗೂ ಪುತ್ರ ಇದ್ದಾರೆ.
ಶೇಖಾವತ್ 1972 ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿದ್ದರು. ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿಯಾಗುವ ಮೊದಲು ಸ್ವತಃ ಪ್ರತಿಭಾ ಅವರು ನಡೆಸುತ್ತಿದ್ದ ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರ 1991-1992ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಅಮರಾವತಿಯ ಮೇಯರ್ ಆಗಿದ್ದರು.
1985-1990 ರ ಅವಧಿಯಲ್ಲಿ ಅವರು ಅಮರಾವತಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಸೇವೆ ಸಲ್ಲಿಸಿ ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಅಮರಾವತಿ ಕ್ಷೇತ್ರದಿಂದ ಚುನಾಯಿಸಲ್ಪಟ್ಟಿದ್ದರು. ಆದರೆ ಅದೇ ಕ್ಷೇತ್ರದಿಂದ 1995ರಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು.
ಶಿಕ್ಷಕಿ ಆತ್ಮಹತ್ಯೆ, ದಲಿತ ರೈತನ ಜಮೀನು ಪರಭಾರೆಯಂಥ ಪ್ರಕರಣಗಳಲ್ಲಿ ಆರೋಪಿಯಾಗಿ ಅವರು ವಿಚಾರಣೆ ಕೂಡ ಎದುರಿಸುವ ಮೂಲಕ ಕೆಲ ವಿವಾದಗಳಿಗೂ ಸಿಲುಕಿದ್ದರು.
https://pragati.taskdun.com/pratap-simhasiddaramaiahgovttaliban-sarkara/
ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ: ಮಹಿಳೆಯರಿಗೆ ಆಹ್ವಾನ
https://pragati.taskdun.com/mass-lalita-sahasranama-chanting-an-invitation-to-women/
BSY ಭಾಷಣಕ್ಕೆ ಮೋದಿ ಶ್ಲಾಘನೆ; ಹೆಮ್ಮೆ ವ್ಯಕ್ತಪಡಿಸಿದ BSB
https://pragati.taskdun.com/modi-praises-bsy-speech-a-proud-cm-basavraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ