ಪ್ರಗತಿವಾಹಿನಿ ಸುದ್ದಿ; ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೆ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಭೇದಿಸಲು ಭಟ್ಕಳ ಡಿ ವೈ ಎಸ್ ಪಿ, ಸಿಪಿಐ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚನೆ ಮಾಡಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಸಮೀಪ ಓಣಿಬಾಗಿಲು ಗ್ರಾಮದಲ್ಲಿ ನಿನ್ನೆ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಲಾಗಿತ್ತು. ಶಂಭು ಭಟ್, ಪತ್ನಿ ಮಹಾದೇವಿ ಭಟ್, ಮಗ ರಾಜಿವ್ ಭಟ್ ಹಾಗೂ ಸೊಸೆ ಕುಸುಮಾ ಭಟ್ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಅದೃಷ್ಟವಶಾತ್ ಕುಸುಮಾ ದಂಪತಿ ಮಗು ಬದುಕುಳಿದಿತ್ತು.
ಪ್ರಕರಣ ಸಂಬಂಧ ಸೊಸೆ ವಿದ್ಯಾ ಭಟ್ ಹಾಗೂ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ.
ಮೂರ್ನಾಲ್ಕು ತಿಂಗಳ ಹಿಂದಷ್ಟೇ ವಿದ್ಯಾ ಭಟ್ ಪತಿ ಸಾವನ್ನಪ್ಪಿದ್ದರು. ಪತಿ ಸಾವನ್ನಪ್ಪಿ ಮೂರ್ನಾಲ್ಕು ತಿಂಗಳಾದರೂ ಆಸ್ತಿ, ಜೀವನಾಂಶದ ವಿಚಾರದ ಬಗ್ಗೆ ಪತಿ ಮನೆಯವರು ಸೂಕ್ತವಾಗಿ ಸ್ಪಂದಿಸುತ್ತಿರಲಿಲ್ಲ. ಗಂಡನ ಮನೆಯ 6 ಎಕರೆ ಜಮೀನಿನಲ್ಲಿ 1 ಎಕರೆ 9 ಗುಂಟೆ ಭೂಮಿಯನ್ನು ವಿದ್ಯಾಗೆ ನೀಡಿದ್ದರು ಎನ್ನಲಾಗಿದೆ. ಆದರೆ ಸೊಸೆ ವಿದ್ಯಾ 3 ಎಕರೆ ಜಮೀನು ನೀಡುವಂತೆ ಕೇಳಿದ್ದರು. ಇದೇ ವಿಚಾರವಾಗಿ ಜಗಳ ನಡೆದಿತ್ತು. ಹಾಗಾಗಿ ಆಸ್ತಿ ವಿವಾದದಿಂದಲೇ ಸೊಸೆ ವಿದ್ಯಾ ಭಟ್ ಕುಮ್ಮಕ್ಕು ನೀಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾ ಭಟ್ ಸೇರಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
*JDS ಎಂಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ; ಪ್ರತಿಷ್ಠಿತ ಶೋ ರೂಂ ಮಾಲೀಕ ವಶಕ್ಕೆ*
https://pragati.taskdun.com/mlc-bhojegowdacar-numberattempt-to-sellstolen-caracused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ