ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಎನ್ನೆಸ್ಸೆಸ್ ಶಿಬಿರ ಸಮಾರೋಪ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಹಾಗೂ ಅಂತರ್ಯಾಮಿ ಫೌಂಡೇಶನ್ ಬೆಳಗಾವಿಯ ಸಹಭಾಗಿತ್ವದಲ್ಲಿ ಒಂದು ವಾರದ ವಾರ್ಷಿಕ ವಿಶೇಷ ಶಿಬಿರ 2023, ಅಧ್ಯಾಯ 01 ನ್ನು ಕಾಕತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋನಟ್ಟಿ ಗ್ರಾಮದಲ್ಲಿ ಫೆ.20 ರಿಂದ ಫೆ.26 ರವರೆಗೆ ರೈತರ ದಿನ, ಸ್ವಚ್ಛ ಸುಂದರ ದಿನ, ಜಾಗೃತ ದಿನ, ಆರೋಗ್ಯ ದಿನ, ಮಕ್ಕಳ ದಿನ ಎಂಬ ವಿಶೇಷ ವಿಷಯಗಳ ಮೇಲೆ ಹಮ್ಮಿಕೊಳ್ಳಲಾಗಿತ್ತು.
ಸಮಾಜದಲ್ಲಿ, ಅದರಲ್ಲೂ ಹಳ್ಳಿಗಳಲ್ಲಿನ ಜನರಲ್ಲಿ ಪ್ರಪಂಚದಲ್ಲಿ ಎಲ್ಲ ರಂಗಗಳಲ್ಲೂ ನಡೆಯುತ್ತಿರುವ ವಿಶೇಷ ಆಧುನಿಕತೆ ಮತ್ತು ಈಗಿನ ಸದ್ಯದ ತಂತ್ರಜ್ಞಾನ, ಹೊಸ ಆವಿಷ್ಕಾರ, ವೈಜ್ಞಾನಿಕ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಶಿಬಿರ ಆಯೋಜಿಸಲಾಗಿತ್ತು.
ಈ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಆರ್. ಪಟಗುಂದಿ ಅವರು ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ ದ ವಾರ್ಷಿಕ ವಿಶೇಷ ಶಿಬಿರದ ಸತತ 7 ದಿನಗಳ ಕಾಲ ಮಾಡಿದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಸಂಯೋಜಕರಾದ ಪ್ರೊ. ಮಂಜುನಾಥ ಶರಣಪ್ಪನವರ ಮತ್ತು ಭಾಗವಹಿಸಿದ ಎಲ್ಲ ವಿಭಾದಗದ ವಿದ್ಯಾರ್ಥಿಗಳನ್ನ ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಭಾಗಮಿಸಿದ್ದ ಕಾಕತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸುನೀಲ ಸುಣಗಾರ ಅವರು ಮಾತನಾಡಿ, “ಸರ್ಕಾರ ಮಾಡಬೇಕಾದ ಜವಾಬ್ದಾರಿಯುತ ಕೆಲೆಸವನ್ನು ಮಾಡಿ ಸೋನಟ್ಟಿ ಗ್ರಾಮದಲ್ಲಿ ಪರಿವರ್ತನೆ ತರಲು ಅತ್ಯಂತ ಶ್ರದ್ಧೆಯಿಂದ ಸೇವೆಯನ್ನ ಸಲ್ಲಿಸಿದ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ, ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ವನ್ನು ಶ್ಲಾಘಿಸಿ ಯಶಸ್ವಿಯಾಗಿ ಒಂದು ವಾರದ ಶಿಬಿರವನ್ನು ಸಂಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಅಂತರ್ಯಾಮಿ ಫೌಂಡೇಷನ್ ನ ಅಧ್ಯಕ್ಷ ನಾಗರಾಜ ಗಸ್ತಿ ಅವರು ಮಾತನಾಡಿ, “ಭಾರತ ದೇಶವನ್ನು ವಿಶ್ವಗುರುವನ್ನಾಗಿಸಲು ಈ ತರಹದ ಶಿಬಿರಗಳು ಬಹುಮುಖ್ಯ ಪಾತ್ರ ವಹಿಸುವುದು, ಯುವಕರು ಪ್ರಶಸ್ತಿ ಪತ್ರಕ್ಕಾಗಿ ಸಮಾಜ ಸೇವೆ ಮಾಡುವ ಬದಲು ನಿಜವಾದ ಬದಲಾವಣೆಗಾಗಿ, ಮನಸ್ಸಿನ ನೆಮ್ಮದಿಗಾಗಿ ಕೆಲಸ ಮಾಡುವ ಉದ್ದೇಶ ಹೊಂದಿರಬೇಕು” ಎಂದರು.
ಸುನೀಲ ಸುಣಗಾರ ಹಾಗೂ ನಾಗರಾಜ ಗಸ್ತಿ ಅವರನ್ನು ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗದ ಪರವಾಗಿ ಸನ್ಮಾನಿಸಲಾಯಿತು. ಜೊತೆಗೆ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗದ ಮುಖ್ಯಸ್ಥ ಹಾಗೂ ಶಿಬಿರದ ಸಂಯೋಜಕ ಪ್ರೊ. ಮಂಜುನಾಥ ಶರಣಪ್ಪನವರ ನಿರೂಪಿಸಿ ವಂದಿಸಿದರು. ರಶ್ಮಿ ಕಂಬಿ ನಿರೂಪಿಸಿದರು.
ಖತರ್ನಾಕ್ ದರೋಡೆಕೋರರ ಗ್ಯಾಂಗ್ ಬಂಧನ; ರಾಮದುರ್ಗ ಪೊಲೀಸ್ ಕಾರ್ಯಾಚರಣೆ
ಅಮೂಲಾಗ್ರ ಬದಲಾವಣೆಯಿಂದ ಅಭಿವೃದ್ಧಿಯ ಹೊಸದಿಕ್ಕು ತೋರಿಸಿದ ಜೊಲ್ಲೆ ದಂಪತಿ: ಕನೇರಿ ಶ್ರೀ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ