Latest

ಕತ್ತು ಹಿಸುಕಿದ ರೀತಿಯಲ್ಲಿ ಸಾವನ್ನಪ್ಪಿದ ರಷ್ಯಾದ ವಿಜ್ಞಾನಿ

ಪ್ರಗತಿವಾಹಿನಿ ಸುದ್ದಿ; ಮಾಸ್ಕೋ : ಕೋವಿಡ್-19 ಲಸಿಕೆಯನ್ನು ಕಂಡು ಹಿಡಿಯುವಲ್ಲಿ ರಷ್ಯಾದ ವಿಜ್ಞಾನಿ ಆಂಡ್ರೆ ಬೊಕೊವ್ (47) ಮಾಸ್ಕೋ ಅಪಾರ್ಟ್ಮೆಂಟ್ನಲ್ಲಿ ಬೆಲ್ಟ್ ಒಂದರಿಂದ ಕತ್ತು ಹಿಸುಕಿದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.

ಮಾಸ್ಕೋದ ಅಪಾರ್ಟ್‌ಮೆಂಟ್‌ನಲ್ಲಿ ಒಳನುಗ್ಗಿ ಬಂದ ಗುಂಪೊಂದರೊಡನೆ ವಾಗ್ವಾದ ನಡೆಸಿದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಈ ಘಟನೆಯ ಹಿಂದಿನ ಸತ್ಯಾ ಸತ್ಯತೆ ಬಯಲಾಗಬೇಕಿದೆ. ಇದರ ಬಗೆಗೆ ಹಲವಾರು ಊಹಾಪೋಹಗಳು ಹಬ್ಬಿದ್ದು, ಕೊಲೆಯೆಂದೇ ಬಿಂಬಸಲಾಗುತ್ತದೆ. ಪೂರ್ಣ ತನಿಖೆಯ ನಂತರವಷ್ಟೇ ಸತ್ಯ ಹೊರ ಬೀಳಬೇಕಾಗಿದೆ.

ಬೊಟಿಕೋವ್ ಅವರನ್ನು ಬೆಲ್ಟ್‌ನಿಂದ ಕತ್ತು ಹಿಸುಕಿದ್ದು, ಪರಿಣಾಮವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಷ್ಯಾದ ವೈರಾಲಜಿಸ್ಟ್ ಆಗಿದ್ದ ಅವರು ದೇಶಕ್ಕಾಗಿ COVID-19 ಲಸಿಕೆಯನ್ನು ಅಭಿವೃದ್ಧಿಪಡಿಸಲು ರಷ್ಯಾಕ್ಕೆ ಸಾಕಷ್ಟು ಸಹಾಯ ಮಾಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button