ರಾಷ್ಟ್ರೀಯ ಮಟ್ಟದ ರಿಮೋಟ್ ಕಂಟ್ರೊಲ್ (ಆರ್ ಸಿ) ವಿಮಾನ ಸ್ಪರ್ಧೆಯಲ್ಲಿ ಕೆಎಲ್ಎಸ್ ಜಿಐಟಿ ತಂಡಕ್ಕೆ ತೃತೀಯ ಬಹುಮಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಜಿಐಟಿ, ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡ, ಗುಜರಾತ್ನ ಪಾರುಲ್ ವಿಶ್ವವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಆರ್ ಸಿ ವಿಮಾನ ಸ್ಪರ್ಧೆ “ಪ್ರೊಜೆಕ್ಷನ್- ಏರ್ ಬಜ್ 2023” ನಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆಯಿತು.
ಐಐಟಿ, ಎನ್ಐಟಿ ಮುಂತಾದ ಪ್ರತಿಷ್ಠಿತ ಸಂಸ್ಥೆ ಗಳಿಂದ 30 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಜಿಐಟಿಯ ತಂಡವು ಪಾಯಿಂಟ್ ಫ್ಲೈಯಿಂಗ್, ಹರ್ಡಲ್ಸ್ ಕ್ಲಿಯರಿಂಗ್ ಮತ್ತು ಪೇಲೋಡ್ ಡ್ರಾಪ್ ಸ್ಪರ್ಧೆಯ ಎಲ್ಲಾ ಮೂರು ಸುತ್ತುಗಳನ್ನು ಪೂರ್ತಿಗೊಳಿಸಿತು. ಜಿಐಟಿಯ ವಿದ್ಯಾರ್ಥಿ ತಂಡವನ್ನು ಓಂಕಾರ್ ಬಿಲಾವರ್, ರೋಹಿತ್ ಪಾಟೀಲ್, ಸೃಷ್ಟಿ ತಿವಾರಿ ಮತ್ತು ಮೈಥಿಲಿ ವಾಸ್ಕರ್ ಪ್ರತಿನಿಧಿಸಿದ್ದರು. ಅಧ್ಯಾಪಕ ಸಂಯೋಜಕಿ ಪ್ರೊ.ಪೂರ್ವಾ ಅಧ್ಯಾಪಕ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು.
ವಿದ್ಯಾರ್ಥಿಗಳ ಸಾಧನೆಗೆ, ವಿದ್ಯಾರ್ಥಿಗಳ ವ್ಯವಹಾರಗಳ ಡೀನ್ ಪ್ರೊ.ಎಸ್.ಪಿ.ದೇಶಪಾಂಡೆ, ಡಾ.ಜೆ.ಕೆ.ಕಿತ್ತೂರ, ಹಾಗೂ ಪ್ರಾಂಶುಪಾಲ ಡಿ.ಎ.ಕುಲಕರ್ಣಿ ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ