ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸಮಾಜದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು, ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ” ಎಂದು ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಹೇಳಿದರು.
ಅವರು ಕೆಎಲ್ಇ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. “ಕುಟುಂಬದಲ್ಲಿ ತಾಯಿಯಾಗಿ ಅತಿ ಪ್ರಮುಖ ಪಾತ್ರ ವಹಿಸುತ್ತಾಳೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜಕ್ಕೆ ಕೊಡುಗೆಯನ್ನಾಗಿಸೋಣ. ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿಸೋಣ” ಎಂದು ಅವರು ಹೇಳಿದರು.
ಇನ್ನೋರ್ವ ಅತಿಥಿ ಡಾ. ಸಂಧ್ಯಾ ಪಾಟೀಲ ಮಾತನಾಡಿ, “ಹೆಣ್ಣು- ಗಂಡು ಎಂಬ ತಾರತಮ್ಯ ಮಾಡದೆ ಇಬ್ಬರಿಗೂ ಸಮಾನತೆಯನ್ನು ಕಲ್ಪಿಸಬೇಕು” ಎಂದರು. ಈ ವೇಳೆ ಅವರು ಅನೇಕ ಆರೋಗ್ಯ ಸಲಹೆಗಳನ್ನು ನೀಡಿದರು.
ಷೇರು ಮಾರುಕಟ್ಟೆ ತರಬೇತಿದಾರ ಈಶ್ವರ ಎನ್. ಎಸ್. ಮತ್ತು ಭರತ ನಾಟ್ಯ ಕಲಾ ವಿದುಷಿ ಶ್ರೇಯಲ್ ಶಾ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪಾಲಕ ಶ್ರೀಲಕ್ಷ್ಮಿ ಅಲವಾಡೆ ಪದ್ಯ ಹಾಡಿದರು. ಶಾಲೆಯ ಪ್ರಾಂಶುಪಾಲ ಚೇತನ ಅಲವಾಡೆ ಮಾತನಾಡಿದರು. ಶಿಕ್ಷಕಿ ಅರ್ಷಾ ಶಾಜಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ