Latest

ಸಾಹಿತಿ ಭುವನೇಶ್ವರಿ ಹೆಗಡೆಗೆ ಟಿ.ಸುನಂದಮ್ಮ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ ಶಿರಸಿ: ರಾಜ್ಯದ ಪ್ರತಿಷ್ಠಿತ ಟಿ.ಸುನಂದಮ್ಮ ಸ್ಮಾರಕ ಪ್ರತಿಷ್ಠಾನ ನೀಡುವ 2022ನೇ‌ ಸಾಲಿನ ಟಿ. ಸುನಂದಮ್ಮ ಪ್ರಶಸ್ತಿಗೆ ನಾಡಿನ ಹೆಸರಾಂತ ಸಾಹಿತಿ ಭುವನೇಶ್ವರಿ ಹೆಗಡೆ ಆಯ್ಕೆಯಾಗಿದ್ದಾರೆ.

ಮಾ.18ರಂದು ಸಂಜೆ 5ಕ್ಕೆ ಬೆಂಗಳೂರಿ‌ನ ಕನ್ನಡ ಸಾಹಿತ್ಯ ಪರಿಷತ್ ನ ಅಕ್ಕಮಹಾದೇವಿ ಸಭಾಂಗಣದಲ್ಲಿ‌ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಹೆಸರಾಂತ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅವರು ಪ್ರದಾನ ಮಾಡಲಿದ್ದಾರೆ.

ಇದೇ ವೇಳೆ ಹಾಸ್ಯ ಬರಹಗಾರ ದುಂಡಿರಾಜ್ ಅವರ ಟಿ.ಸುನಂದಮ್ಮ ಸಾಹಿತ್ಯ ಸಂಪುಟ 3 ಹಾಗೂ ಹಿರಿಯ ಲೇಖಕಿ ಎಲ್‌.ವಿ.ಶಾಂತಕುಮಾರಿ ಅವರು‌ ನಾನು ಕಂಡಂತೆ ಟಿ.ಸುನಂದಮ್ಮ ಕೃತಿ ಬಿಡುಗಡೆಗೊಳಿಸಲಿದ್ದಾರೆ‌. 

ಮೂಲತಃ ಉತ್ತರ‌ ಕನ್ನಡದವರಾಗಿರುವ ಭುವನೇಶ್ವರಿ ಹೆಗಡೆ ಅವರು ವಾಗ್ಮಿಯಾಗಿ, ಹಾಸ್ಯ‌ ಲೇಖಕಿಯಾಗಿ ಪರಿಚಿತರಾಗಿದ್ದಾರೆ.

https://pragati.taskdun.com/various-important-news-2/
https://pragati.taskdun.com/case-registerd/
https://pragati.taskdun.com/precaution-to-avoid-electricity-problem-in-summer-cm-promises-farmers/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button