ಪ್ರಗತಿವಾಹಿನಿ ಸುದ್ದಿ, ಜೋಹಾನ್ಸ್‌ಬರ್ಗ್: ಕೋವಿಡ್ ನಂತರದ ದಿನಗಳಲ್ಲಿ ವಯೋಮಾನದ ಮಿತಿಯಿಲ್ಲದೆ ಸಂಭವಿಸುತ್ತಿರುವ ಹಠಾತ್ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. 27 ವರ್ಷ ವಯಸ್ಸಿನ ರಾಪರ್ ಕೋಸ್ಟಾ ಟಿಚ್ ಅವರು ದಕ್ಷಿಣ ಆಫ್ರಿಕಾದಲ್ಲಿ ವೇದಿಕೆಯ ಮೇಲೆ ಕುಸಿದು ಸಾವನ್ನಪ್ಪಿದರು.
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಅಲ್ಟ್ರಾ ಸೌತ್ ಆಫ್ರಿಕಾ ಸಂಗೀತ ಉತ್ಸವದಲ್ಲಿ ವೇದಿಕೆಯಲ್ಲಿ ಈ ದುರ್ಘಟನೆ ನಡೆದಿದೆ. ರಾಪರ್ ತಮ್ಮ ಪ್ರದರ್ಶನದ ಸಮಯದಲ್ಲಿ ವೇದಿಕೆಯ ಮೇಲೆ ಹಠಾತ್ ಕುಸಿದು ಬಿದ್ದ ವೀಡಿಯೊ ಆನ್‌ಲೈನ್‌ನಲ್ಲಿ ಸಹ ಕಾಣಿಸಿಕೊಂಡಿದೆ. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಭಾರತೀಯ ಖ್ಯಾತ ಸಂಗೀತಗಾರ ಕೆಕೆ ಕೂಡ ಇದೇ ರೀತಿ ವೇದಿಕೆಯಲ್ಲಿ ಕುಸಿತಕ್ಕೊಳಗಾಗಿ ಮೃತಪಟ್ಟಿದ್ದರು. ಅಂಥದ್ದೇ ದೃಶ್ಯ ೀ ವೇದಿಕೆಯಲ್ಲೂ ಕಂಡುಬಂದಿದ್ದು ಕೋಸ್ಟಾ ಟಿಚ್ ಸಾವಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ