Latest

ಪ್ರಧಾನಿ ಮೋದಿ ರೋಡ್ ಶೋ ಆರಂಭ; ರಸ್ತೆಯುದ್ದಕ್ಕೂ ಪುಷ್ಪವೃಷ್ಟಿಗರೆದ ಜನರು; ಸಕ್ಕರೆ ನಾಡಲ್ಲಿ ನಮೋ ಕಹಳೆ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸಿದ್ದು, ಭವ್ಯ ಸ್ವಾಗತ ಕೋರಲಾಗಿದೆ. ಮಂಡ ಜಿಲ್ಲೆಯಾದ್ಯಂತ ಕೇಸರಿ ಕಲರವ ಕಳೆಗಟ್ಟಿದೆ.

ಮೈಸೂರಿನಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ಮಂಡ್ಯದ ಪಿಇಎಸ್ ಕಾಲೇಜು ಮೈದಾನಕ್ಕೆ ಬಂದಿಳಿದ ಪ್ರಧಾನಿ ಮೋದಿ ಅಲ್ಲಿಂದ ಮಂಡ್ಯದ ಪ್ರವಾಸಿ ಮಂದಿರಕ್ಕೆ ತೆರಳಿದರು. ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ರೋಡ್ ಶೋ ಆರಂಭಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಕೈ ಬೀಸುತ್ತ ಪ್ರಧಾನಿ ಸಾಗಿದ್ದಾರೆ. ಮೋದಿ ಮೋದಿ ಜಯಘೋಷಗಳೊಂದಿಗೆ ಬಿಜೆಪಿ ಕಾರ್ಯಕರ್ತರು, ನೆರೆದ ಜನರು ಪ್ರಧಾನಿ ಮೇಲೆ ಪುಷ್ಪವೃಷ್ಟಿಗರೆದು ಜಯ ಘೋಷಗಳೊಂದಿಗೆ ಸ್ವಾಗತಿಸಿದ್ದಾರೆ.

Home add -Advt

ಅಪಾರ ಜನಸ್ತೋಮ ಕಂಡು ಪ್ರಧಾನಿ ಮೋದಿ ಹರ್ಷಚಿತ್ತರಾಗಿದ್ದಾರೆ. ಪ್ರವಾಸಿ ಮಂದಿರದಿಂದ ನಂದಾ ಸರ್ಕಲ್ ವರೆಗೆ ಸುಮಾರು 1.8 ಕೀ.ಮೀ ವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಾರೆ. ಜೆಡಿಎಸ್ ಭದ್ರ ಕೋಟಿಯಲ್ಲಿ ಪ್ರಧಾನಿ ಮೋದಿ ಮೇನಿಯಾ ಶುರುವಾಗಿದೆ.

Related Articles

Back to top button