ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಭಾರತ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಡಾ. ಅಂಬೇಡ್ಕರ್ ಅವರು ನಿಪ್ಪಾಣಿಯಲ್ಲಿ ವಾಸ್ತವ್ಯ ಮಾಡಿದ್ದರು. ಈ ಕಾರಣದಿಂದಾಗಿ ಅವರ ಅನುಯಾಯಿಗಳು ಅವರ ಸ್ಮಾರಕವಾಗಬೇಕೆಂದು ಕನಸು ಕಂಡಿದ್ದರು. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಈ ಕನಸನ್ನು ಸಾಕಾರಗೊಳಿಸಲು ಯೋಗದಾನ ನೀಡಿದ್ದಾರೆ. ಈ ಸ್ಮಾರಕವು ಅನುಯಾಯಿಗಳಿಗೆ ಸ್ಪೂರ್ತಿವಾಗಲಿದೆ ಎಂದು ಪ್ರೊ. ಡಾ. ಅಚ್ಯುತ ಮಾನೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಗವಾನಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತಿರ ೧೦ ಎಕರೆ ಜಾಗದಲ್ಲಿ ಭವ್ಯವಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕವನ್ನು ನಿರ್ಮಿಸಲಾಗುತ್ತಿದ್ದು, ಈ ಸ್ಮಾರಕದ ಭೂಮಿ ಪೂಜೆ, ಗಂಗಾ ಕಲ್ಯಾಣ ಯೋಜನೆ ಅಡಿಯ ಸಾಮಗ್ರಿಗಳ ವಿತರಣೆ ಮತ್ತು ಹಿಂದುಳಿದ ವರ್ಗದವರಿಗೆ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ನೀಡಲಾದ ದ್ವಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರಾರಂಭದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕತೆಯನ್ನು ಬಂಡಾ ಘೋರ್ಪಡೆ ಅವರು ನೆರವೇರಿಸಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡುತ್ತಾ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕಕ್ಕೆ ಪ್ರಥಮ ಹಂತದಲ್ಲಿ ೧೦ ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ ಹಾಗೂ ಸ್ಮಾರಕಕ್ಕೆ ೧.೩೦ ಕೋಟಿ ರೂ ಅನುದಾನವನ್ನು ಸಹ ಮಂಜೂರು ಮಾಡಲಾಗಿದೆ. ಅದರ ಜೊತೆಗೆ ಅವರು ಪುಸ್ತಕ ಪ್ರೇಮಿ ಆಗಿದ್ದರಿಂದ ಒಂದು ಬೃಹತ್ ಗ್ರಂಥಾಲಯ ಹಾಗೂ ವಿಜ್ಞಾನ ಕೇಂದ್ರವನ್ನು ಸಹ ನಿರ್ಮಿಸಲಾಗುವುದು, ಈ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಸ್ಥರಗಳಲ್ಲಿ ಸಮಿತಿಯ ನಿಯುಕ್ತಿಯನ್ನು ಸಹ ಮಾಡಲಾಗಿದೆ ಎಂದು ತಿಳಿಸಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಮುಂದೆ ಮಾತನಾಡುತ್ತಾ, ಕೇಂದ್ರ ಶಾಸನದ ಯೋಜನೆಯಡಿ ೩೫೦೦ ಹೆಕ್ಟರ್ ಗುಡ್ಡ ಗಾಡು ಪ್ರದೇಶಗಳಿಗೆ ನೀರು ಪೂರೈಸಲು ಗವಾನಿ, ಶೇಂಡೂರ, ಗೊಂದಿಕೋಪ್ಪಿ ಗ್ರಾಮಗಳಲ್ಲಿ ೯.೨೦ ಕೋಟಿ ರೂ ನಿಧಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಡಿ ೫೦ ಕ್ಕೂ ಹೆಚ್ಚು ದ್ವಿಚಕ್ರ ವಾಹನ ಪಡೆದ ಲಾಭಾರ್ಥಿಗಳು ತಮ್ಮ ವ್ಯವಸಾಯ ವೃದ್ಧಿಗಾಗಿ ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ವೇಳೆ ನಗರಾಧ್ಯಕ್ಷ ಜಯವಂತ ಭಾಟಲೆ, ಸಭಾಪತಿ ರಾಜು, ಶಹರ ಬಿಜೆಪಿ ಅಧ್ಯಕ್ಷ ಪ್ರನವ ಮಾನ್ವಿ, ನಗರಸೇವಕ ಸಂಜಯ ಸಾಂಗಾವಕರ, ಅಭಿನಂದನ, ಸುಹಾಸ ಗುಗೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ