
ಹುಕ್ಕೇರಿಯಲ್ಲಿ ಮತದಾನ ಜಾಗೃತಿಗಾಗಿ ಬೈಕ್ ಜಾಥಾ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ತಾಲ್ಲೂಕು ಪಂಚಾಯತ ಆವರಣದಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಲಾಸರಾಜ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ತಾಲ್ಲೂಕ ಪಂಚಾಯತಿ ವತಿಯಿಂದ ಬುಧವಾರ ಮಾರ್ಚ್ ೨೯ ರಂದು ಆಯೋಜಿಸಿದ್ದ ಮತ ಜಾಗೃತಿ ಬೈಕ್ ಜಾಥಾ ಹುಕ್ಕೇರಿ ಪಟ್ಟಣ, ಬಸ್ತವಾಡ, ಗೌಡವಾಡ, ಬಡಕುಂದ್ರಿ ಮುಖಾಂತರ ಯಮಕನಮರಡಿ ಗ್ರಾಮಗಳ ವಿವಿಧ ಬೀದಿಗಳಲ್ಲಿ ಬೈಕ್ ಮುಖಾಂತ ಸಂಚರಿಸಿ ಮತದಾನದ ಕುರಿತು ಜಾಗೃತಿ ಮಾಡಲಾಯಿತು. ಜಾಗೃತಿಯನ್ನು ಜಿಂಗಲ್ಸ್ ಮತ್ತು ಸ್ಲೋಗನಗಳ ಮೂಲಕ ಪ್ರಚಾರ ಮಾಡಲಾಯಿತು.
ಎಲ್ಲ ಬೈಕ್ ಗಳಿಗೆ ಮತದಾನದ ಮಹತ್ವ ಸಾರುವ ಸ್ಟೀಕ್ಕರಗಳ ಅಂಟಿಸಿ ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಲಾಸರಾಜ್, ಸಹಾಯಕ ಕಾರ್ಯಕಾರಿ ಅಭಿಯಂತರರು ಪಂ.ರಾ.ಇಂ. ಉಪವಿಭಾಗ ಹುಕ್ಕೇರಿ, ಸಹಾಯಕ ನಿರ್ದೇಶಕರಾದ (ಉ.ಗ್ರಾ) ಲಕ್ಷ್ಮೀನಾರಯಣ ಪಿ, ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ವೀರಾಂಜನೇಯ ಪ್ರಸಾದ, ಮಾನೇಜರ ನೀಲಕಂಠ ಕುಲಕರ್ಣಿ, ತಾಂತ್ರಿಕ ಸಂಯೋಜಕ ಅರ್ಷದ ನೇರ್ಲಿ, ತಾಲ್ಲೂಕಾ ಐಇಸಿ ಸಂಯೋಜಕರಾದ ಮಹಾಂತೇಶ ಬಾದವನಮಠ, ಎಂ.ಐ.ಎಸ್. ಶಂಕರ ಶಿರಗುಪ್ಪಿ ಸೇರಿಂದತೆ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ವಿವಿಧ ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ವಿಧಾಸಭಾ ಚುನಾವಣೆ: ಬೆಳಗಾವಿ ನಗರಾಭಿವೃಧ್ದಿ ಪ್ರಾಧಿಕಾರದಲ್ಲಿ ಸಹಾಯವಾಣಿ ಕೇಂದ್ರ:
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ ರ ಕುರಿತು ೧೩-ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವದೇ ಚುನಾವಣಾ ಸಂಬಂಧಿತ ದೂರುಗಳಿಗೆ, ಹಾಗೂ ಇತರ ಸಹಾಯಕ್ಕಾಗಿ ಚುನಾವಣಾಧಿಕಾರಿಯವರ ಕಛೇರಿ ಬೆಳಗಾವಿ ನಗರಾಭಿವೃಧ್ದಿ ಪ್ರಾಧಿಕಾರದಲ್ಲಿ ಸಹಾಯವಾಣಿ ಕೇಂದ್ರ (೨೪/೭) ಸ್ಥಾಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಸಹಾಯವಾಣಿ ಕೇಂದ್ರದ (೨೪/೭) ದೂರವಾಣಿ ಸಂಖ್ಯೆಗಳು ೦೮೩೧-೨೦೦೨೮೭೮ ಮೋಬೈಲ್ ಸಂಖ್ಯೆ ೭೮೯೯೬೭೨೧೮೩ ಗೆ ಸಂಪರ್ಕಿಸಬಹುದು ಎಂದು ೧೩-ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಚುನಾವಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಗವಾಡ ತಾಲೂಕಿನಾದ್ಯಂತ ಮತದಾನ ಜಾಗೃತಿ ಅಭಿಯಾನ:
ಬೆಳಗಾವಿ, ಏ.೦೧ (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಯಲ್ಲಿ ಕಾಗವಾಡ ತಾಲೂಕಿನಾದ್ಯಂತ ಶನಿವಾರ ತಾಲೂಕು ಸ್ವೀಪ ಸಮೀತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕಾಗವಾಡ ತಾಲೂಕಿನ ಕುಸನಾಳ ಗ್ರಾಮದಲ್ಲಿ ಗ್ರಾಮಪಂಚಾಯತಿ ಸಿಬ್ಬಂದಿಗಳು ಮನೆಮನೆ ಭೇಟಿ ನೀಡಿ ಕರಪತ್ರಗಳ ಹಂಚಿಕೆ ಮಾಡುವುದರ ಜೊತೆಗೆ ಸ್ವಚ್ಚವಾಹಿನಿ ಜಿಂಗಲ್ಸ್ ಮೂಲಕ ಮತದಾನದ ಅರಿವು ಮೂಡಿಸಿದರು. ಕೃಷ್ಣಾ ಕಿತ್ತೂರು ಗ್ರಾಮದಲ್ಲಿ ಎನ್ ಆರ್ ಎಲ್ ಎಮ್ ಮಹಿಳಾ ಒಕ್ಕೂಟದ ವತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಗ್ರಾಮದ ಯುವಕ ಯುವತಿಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ನನ್ನ ಮತ ನನ್ನ ಹಕ್ಕು, ನನ್ನ ಮತ ಮಾರಾಟಕ್ಕಿಲ್ಲ, ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಿ, ಪ್ರತಿ ಮತವೂ ಅತ್ಯಮೂಲ್ಯ ತಪ್ಪದೇ ಮತದಾನ ಮಾಡಿ ಹೀಗೆ ಅನೇಕ ಘೋಷಣೆಗಳ ಜೊತೆಗೆ ಅಂದವಾಗ ರಂಗೋಲಿ ಬಿಡಿಸಿದ್ದರು. ಮಂಗಸೂಳಿ ಗ್ರಾಮದಲ್ಲಿ ಶಾಲಾ ಮಕ್ಕಳು ಜಾಗೃತಿ ಜಾಥಾ ನಡೆಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಿಗೆ ಅರಿವು ಮೂಡಿಸಿದರು.
ಗಾ.ಪಂ ಅಭಿವೃದ್ದಿ ಅಧಿಕಾರಿಗಳಾದ ಪ್ರಶಾಂತ ಇನಾಮದಾರ, ಸಂಜೀವಸೂರ್ಯವಂಶಿ, ಶ್ರೀದೇವಿವಾಲಿ, ಹಾಗೂ ಅಂಗನವಾಡಿ ಆಶಾಕಾರ್ಯಕರ್ತರು, ಗ್ರಾಮಸ್ಥರು ಮುಂತಾದವರು ಅಭಿಯಾನದಲ್ಲಿ ಭಾಗವಹಿಸಿದ್ದರು.
ಕಿತ್ತೂರಿನಲ್ಲಿ ಮತದಾನ ಜಾಗೃತಿ ಬೈಕ್ ರ‍್ಯಾಲಿ:
ಬೆಳಗಾವಿ, ಏ.೦೧ (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಪಂಚಾಯಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶನಿವಾರದಂದು ಕಿತ್ತೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಬೈಕ್ ರ‍್ಯಾಲಿ ಗೆ ಕಿತ್ತೂರು ಮತ ಕ್ಷೇತ್ರದ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಹಾಗೂ ತಾಲೂಕು ಸ್ವೀಪ ಸಮಿತಿ ಅಧ್ಯಕ್ಷ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ, ಚುನಾವಣಾ ಅಧಿಕಾರಿ ರೇಷ್ಮಾ ಹಾನಗಲ್ ಅವರು ಮಾತನಾಡಿ, ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಬೇಕಿದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನೈತಿಕ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಹಕರಿಸಬೇಕು’ ಎಂದು ತಿಳಿಸಿದರು.
ತಾಲೂಕು ಸ್ವೀಪ ಸಮಿತಿ ಅಧ್ಯಕ್ಷರಾದ, ತಾಪಂ ಇಒ ಸುಭಾಷ ಸಂಪಗಾಂವಿ ಅವರು ಮಾತನಾಡಿ, ’ಮತದಾರರು ಪ್ರಾಮಾಣಿಕ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಅಂದಾಗ ಮಾತ್ರ ಮತದಾನದಿಂದ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ’ ಎಂದು ಹೇಳಿದರು.
ಸಹಾಯಕ ಚುನಾವಣಾಧಿಕಾರಿ, ತಹಸೀಲ್ದಾರ್ ರವೀಂದ್ರ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ‍್ಟಿ.ಬಳಿಗಾರ, ತಾಪಂ ಸಹಾಯಕ ನಿರ್ದೇಶಕರಾದ ಸುರೇಶ ನಾಗೋಜಿ ಹಾಗೂ ಲಿಂಗರಾಜ ಹಲಕರ್ಣಿಮಠ ಸೇರಿದಂತೆ ತಾಪಂ ಕಚೇರಿ ಸಿಬ್ಬಂದಿ, ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ವಾಪಿಸಂ: ೦೬
ಸ್ವೀಪ್ ಸಮಿತಿ ವತಿಯಿಂದ ಸವದತ್ತಿ ತಾಲೂಕಿನಲ್ಲಿ ಮತದಾನ ಜಾಗೃತಿ ಬೈಕ ರ‍್ಯಾಲಿ
ಬೆಳಗಾವಿ, ಏ.೦೧ (ಕರ್ನಾಟಕ ವಾರ್ತೆ): ಸವದತ್ತಿ ತಾಲೂಕೂ ಪಂಚಾಯತ ಆವರಣದಲ್ಲಿ ಗುರುವಾರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೈಕ ರ‍್ಯಾಲಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣಕುಮಾರ ಸಾಲಿ ಚಾಲನೆ ನೀಡಿದರು.
ತಾಲೂಕ ಪಂಚಾಯತ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ತಾಪಂ ಕಾರ್ಯಾಲಯದಿಂದ ಆರಂಭವಾದ ಬೈಕ್ ರ‍್ಯಾಲಿಯೂ ಸವದತ್ತಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಬಸ ನಿಲ್ದಾಣದಲ್ಲಿ ಸಂಚರಿಸಿ ಬೆಟಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಿ ಮತದಾರರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ತಾ.ಪಂ ಯೋಜನಾಧಿಕಾರಿಗಳಾದ ಡಾ. ಮಾರುತಿ ಚೌಡಪ್ಪನವರ, ತಾಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ರಮೇಶ ರಕ್ಕಸಗಿ, ತಾಪಂ ಸಹಾಯಕ ನಿರ್ದೇಶಕರಾದ (ಪಂ.ರಾ) ಆರ್ ಎ ಪಾಟೀಲ, ತಾಪಂ ವ್ಯವಸ್ಥಾಪಕರಾದ ಜಿ ಎಸ್ ಬಡೆಮ್ಮಿ, ಐಇಸಿ ಸಂಯೋಜಕರಾದ ಮಲೀಕಜಾನ ಮೋಮಿನ, ತಾಂತ್ರಿಕ ಸಂಯೋಜಕರಾದ ಮಹಾದೇವ ಕಾಮನ್ನವರ ಎಂಐಎಸ್ ಸಂಯೋಜಕ ನಾಗರಾಜ ಬೆಹರೆ, ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಮ್ ಆರ್ ಡಬ್ಲ್ಯು , ವಿಆರ್ ಡಬ್ಲ್ಯೂ, ಕಾಯಕ ಮಿತ್ರರು, ಬಿಎಫ್ ಟಿಗಳು, ಬಿಎಲ್‌ಓಗಳು, ಸುಪರ ವೈಸರ್, ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.
ಕಾಗವಾಡದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳ ಕಛೇರಿ ಪ್ರಾರಂಭ:
ಕರ್ನಾಟಕ ವಿಧಾನಸಭೆ ೨೦೨೩ ನೇ ಸಾಲಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಿತವಾಗಿದ್ದು, ೦೪- ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳ ಕಛೇರಿಯನ್ನು ಶಿವಾನಂದ ಮಹಾವಿದ್ಯಾಲಯ ಕಾಗವಾಡ-೨೯೧೨೨೩ ಬಸ್ ನಿಲ್ದಾಣದ ಹತ್ತಿರ ಕೊಠಡಿ ಸಂಖ್ಯೆ ೦೨ ರಲ್ಲಿ ಪ್ರಾರಂಭಿಸಲಾಗಿದೆ.
೦೪- ಕಾಗವಾಡ ವಿಧಾನಸಭಾ ಮತಕ್ಷೇತ್ರ ಕಛೇರಿ ದೂರವಾಣಿ ಸಂಖ್ಯೆ ೦೮೩೩೯-೨೦೦೧೭೨, ೨೪/೭ ಸಹಾಯವಾಣಿ ಸಂಖ್ಯೆ ೦೮೩೩೯-೨೬೪೫೫೫ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕಾರ್ಯಕ್ರಮದ ಅನುಮತಿ ಪಡೆಯಬೇಕಾದಲ್ಲಿ ಆನ್‌ಲೈನ್ ಮೂಲಕ ಚುನಾವಣೆ ವೆಬ್‌ಸೈಟ್ನ ಲ್ಲಿ ಅರ್ಜಿಯನ್ನು ೪೮ ಗಂಟೆಗಳ ಒಳಗಾಗಿ ಸಲ್ಲಿಸಿ ಚುನಾವಣಾ ಅಧಿಕಾರಿಗಳ ಅನುಮತಿಯನ್ನು ಪಡೆಯಬಹುದಾಗಿದೆ ಎಂದು ಕಾಗವಾಡ ತಹಶೀಲ್ದಾರ ಹಾಗೂ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಗವಾಡದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳ ಕಛೇರಿ ಪ್ರಾರಂಭ:
ಬೆಳಗಾವಿ, ಏ.೦೧ (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ (ಏ.೦೫) ಡಾ. ಬಾಬು ಜಗಜೀವನ್ ರಾಮ್ ಉದ್ಯಾನವನ, ಸಂಗಮೇಶ್ವರ ನಗರದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಡಾ. ಬಾಬು ಜಗಜೀವನ್ ರಾಮ್ ಅವರ ೧೧೬ ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುವುದು.
ಕಾರ್ಯಕ್ರಮದ ಉದ್ಘಾಟಕರಾಗಿ ಪ್ರಾದೇಶಿಕ ಆಯುಕ್ತರಾದ ಡಾ. ಬಗಾದಿ ಗೌತಮ ಅವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕರಾದ ಎನ್ ಸತೀಶಕುಮಾರ ಅವರು ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಪಾಟೀಲ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಡಾ. ಎಂ ಬಿ. ಬೋರ್ಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಂಜೀವ ಎಂ. ಪಾಟೀಲ ,ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೋಯರ್ ಅವರು ಆಗಮಿಸಲಿದ್ದಾರೆ. ಹಾಗೂ ಉಪನ್ಯಾಸಕರಾಗಿ ಕೆ.ವಿ.ಜಿ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಬಸವರಾಜ ವಾಯ್.ಅರವಳ್ಳಿ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಘಾಳಿ ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ