ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಲಕ್ಷ್ಮಿ ಟೇಕ್ ಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಇದೇ 7ರಂದು ಸಂಜೆ 6 ಗಂಟೆಗೆ 40 ಜನ ಮಹಿಳೆಯರಿಗೆ ವೇದಮಾತಾ ಪ್ರಶಸ್ತಿ ಪ್ರದಾನ ನಡೆಯಲಿದೆ.
2018 ನವಂಬರ್ ತಿಂಗಳಲ್ಲಿ ಪ್ರಾರಂಭಗೊಂಡ ವೇದಾಧ್ಯಯನ ತರಬೇತಿ ಇದೇ ಏಳರಂದು ಮುಕ್ತಾಯಗೊಳ್ಳುತ್ತದೆ. ಶಾಸಕಿ ಶಶಿಕಲಾ ಜೊಲ್ಲೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರ ಡಾ. ಪ್ರಕಾಶ್ ಬಾಗೋಜಿ ಮಹಿಳೆಯರಿಗೆ ವೇದಮಾತಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾರಂಭದ ಸಾನಿಧ್ಯವನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ.
ಗೋಕಾಕ್ ತಾಲೂಕಿನ ಪಿ ಜಿ ಹುಣಶ್ಯಾಳ ಗ್ರಾಮದ ಶ್ರೀ ನಿಜಗುಣ ದೇವರು ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ವೇದ ತರಬೇತಿ ನೀಡಿದ, ಧಾರವಾಡದ ಕವಿತಾ ಹಿರೇಮಠ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
500 ಹೆಣ್ಣು ಮಕ್ಕಳಿಗೆ ವೇದ ತರಬೇತಿಯನ್ನು ನೀಡಿ, “ವೇದಮಾತಾ ಪ್ರಶಸ್ತಿ” ನೀಡಿರುವ ಕೀರ್ತಿಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪಾತ್ರರಾಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ