ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಿಬ್ಬಂದಿ ಜೊತೆ ಪ್ರಯಾಣಿಕರ ಜಗಳ ತಾರಕಕ್ಕೇರಿದ ಪರಿಣಾಮ ವಿಮಾನವೊಂದು ಯೂ ಟರ್ನ್ ಹೊಡೆಯುವಂತಾಗಿದೆ.
ಏರ್ ಇಂಡಿಯಾದ A1 111 ವಿಮಾನ ದೆಹಲಿಯಿಂದ ಲಂಡನ್ ಗೆ ಹೊರಟಿತ್ತು. ವಿಮಾನ ಹಾರಿದ ಕೆಲವೇ ನಿಮಿಷಗಳಲ್ಲಿ ಕೆಲವು ಪ್ರಯಾಣಿಕರು ಇಬ್ಬರು ಕ್ಯಾಬಿನ್ ಸಿಬ್ಬಂದಿ ಜೊತೆ ಕ್ಯಾತೆ ತೆಗೆದು ಜಗಳಕ್ಕಿಳಿದರಲ್ಲದೆ ಅಶಿಸ್ತಿನಿಂದ ವರ್ತಿಸತೊಡಗಿದರು. ಮೌಖಿಕ ಮತ್ತು ಲಿಖಿತ ಎಚ್ಚರಿಕೆಗಳಿಗೂ ಈ ಪ್ರಯಾಣಿಕರು ಬಗ್ಗಲಿಲ್ಲ.
ಇದರ ಪರಿಣಾಮ ವಿಮಾನವನ್ನು ಪುನಃ ದೆಹಲಿ ನಿಲ್ದಾಣದತ್ತ ತಿರುಗಿಸಲಾಯಿತು. ಘಟನೆಯ ಬಗ್ಗೆ ಏರ್‌ಲೈನ್ಸ್ ದೆಹಲಿ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದೆ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಗಳ ತೆಗೆದ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ