ಜಗದೀಶ್ ಶೆಟ್ಟರ್ ಗೆ ಹೈಕಮಾಂಡ್ ಶಾಕ್; ಕಂಗಾಲಾದ ಮಾಜಿ ಸಿಎಂ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಕ್ಷೇತ್ರ ತ್ಯಾಗ ಮಾಡುವಂತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಶೆಟ್ಟರ್, ನೀವು ಸೀನಿಯರ್ ಇದ್ದೀರಿ, ಬೇರೆಯವರಿಗೆ ಅವಕಾಶ ಕೊಡಿ ಎಂದು ಪಕ್ಷದ ಹೈಕಮಾಂಡ್ ನಿಂದ ಇಂದು ಬೆಳಗ್ಗೆ 12 ಗಂಟೆಗೆ ಫೋನ್ ಬಂದಿತ್ತು, ನನಗೆ ಇದರಿಂದ ಶಾಕ್ ಆಗಿದೆ ಎಂದಿದ್ದಾರೆ.

30 ವರ್ಷದಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಿದ್ದೇನೆ. ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ. ಪಕ್ಷ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. ನೂರಾರು ಜನರಿಗೆ ಟಿಕೆಟ್ ಕೊಡಿಸಿದ್ದೇನೆ. ಆದರೂ ಈ ರೀತಿ ಹೇಳುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

6 ಬಾರಿ ಆಯ್ಕೆಯಾಗಿದ್ದೇನೆ, ಪ್ರತಿ ಬಾರಿ 25 ಸಾವಿರ ಅಂತರದಿಂದ ಆಯ್ಕೆಯಾಗಿದ್ದೇನೆ,. ನಿಲ್ಲಬಾರದೆನ್ನುವುದಕ್ಕೆ ಕಾರಣವೇನು? ಸಮೀಕ್ಷೆ ಮಾಡಿದಾಗಲೂ ಪೊಸಿಟಿವ್ ಬಂದಿದೆ. ರಾಜಕಾರಣದಲ್ಲೂ ಕಪ್ಪು ಚುಕ್ಕೆ ಇಲ್ಲ. ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ಆದಾಗ್ಯೂ ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಗೌರವ ಇಲ್ಲವೇ? ನನಗೆ ನಿಜವಾಗಿ ಬೇಸರವಾಗಿದೆ ಎಂದು ಶೆಟ್ಟರ್ ತಿಳಿಸಿದರು.

ಬೇರೆ ಅವಕಾಶ ಕೊಡುತ್ತೇವೆ. ಬಂದು ಚರ್ಚಿಸಿ ಎಂದರು. ಮಾಜಿ ಮುಖ್ಯಮಂತ್ರಿಯಾಗಿ ಗೌರವ ಕೊಡುವ ಕೆಲಸವಾಗಬೇಕಿದೆ. ಹಾಗಿದ್ದರೆ 2 -3 ತಿಂಗಳ ಹಿಂದೆಯೇ ಕರೆದು ಹೇಳಬೇಕಿತ್ತು. ಆಗ ಹೇಳಿದ್ದರೆ ಗೌರವ ಇರುತ್ತಿತ್ತು. ನಾಮಪತ್ರ ಸಲ್ಲಿಸಲು 2 -3 ದಿನ ಇರುವಾಗ ಹೀಗೆ ಹೇಳಿದರೆ ಏನರ್ಥ? ನಾನು ಅವಕಾಶ ಕೊಡಿ ಎಂದು ಹೇಳಿದ್ದೇನೆ. ಈ ಬಾರಿ ಸ್ಪರ್ಧಿಸುವುದಾಗಿ ತಿಳಿಸಿದ್ದೇನೆ ಎಂದು ಶೆಟ್ಟರ್ ಹೇಳಿದರು.

ಬಿಜೆಪಿಯ ಇನ್ನೂ 4 -5 ಹಿರಿಯ ನಾಯಕರಿಗೆ ಚುನಾವಣೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡ್ ಸಂದೇಶ ಕಳಿಸಿದೆ ಎಂದು ಹೇಳಲಾಗುತ್ತಿದೆ.

https://pragati.taskdun.com/ks-eshwarappa-has-announced-his-political-retirement/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button