Latest

ಲಕ್ಷ್ಮಣ ಸವದಿಗೆ ಟಿಕೆಟ್ ಇಲ್ಲ: ಸಿಎಂ ಬೊಮ್ಮಾಯಿ ಸುಳಿವು

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ಸುದ್ದಿ ಹರಡಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಲಕ್ಷ್ಮಣ ಸವದಿ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಥಣಿ ಟಿಕೆಟ್ ಬೇಕೆಂದು ಅವರು ಕೇಳುತ್ತಿದ್ದಾರೆ. ಆದರೆ ಮಹೇಶ ಕುಮಟಳ್ಳಿ ಅವರು ನಮ್ಮ ಸರಕಾರ ಅಸ್ಥಿತ್ವಕ್ಕೆ ಬರಲು ಕಾರಣರಾದವರು. ನಮಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಲಕ್ಷ್ಮಣ ಸವದಿಯವರಿಗೆ ಮನದಟ್ಟು ಮಾಡಿದ್ದೇನೆ. ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ತಿಳಿಸಿದ್ದೇನೆ ಎಂದು ಹೇಳಿದರು.

Home add -Advt

ತನ್ಮೂಲಕ ಮಹೇಶ ಕುಮಟಳ್ಳಿಗೇ ಈ ಬಾರಿ ಅಥಣಿ ಟಿಕೆಟ್ ಎನ್ನುವ ಸುಳಿವನ್ನು ಬೊಮ್ಮಾಯಿ ನೀಡಿದರು.

https://pragati.taskdun.com/lakshmana-savadicongressmahesh-kumatalliathani-bjpticket/
https://pragati.taskdun.com/is-ramesh-jarakiholi-important-for-bjp-is-lakshman-savadi-important/

Related Articles

Back to top button