ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಧಾರ್ಮಿಕವಾಗಿ ಮಹಿಳೆಯರನ್ನು ಬೆಳೆಸಿದ್ದೆ ಆದರೆ ಮನೆ ಸಂಸ್ಕಾರಯುತವಾಗಿರುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಸುವಿಚಾರ ಚಿಂತನ ಕಾರ್ಯಕ್ರಮ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಹುಕ್ಕೇರಿ ಹಿರೇಮಠದ ಸಂಯುಕ್ತ ಆಶ್ರಯದಲ್ಲಿ ವೇದಾಧ್ಯಯನ ತರಬೇತಿ ಹೊಂದಿದ ಮಹಿಳೆಯರಿಗೆ ವೇದ ಮಾತಾ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಸಚಿವ ಸ್ಥಾನ ನೀಡುವುದರ ಮೂಲಕ ದೇಶದ ಮೊದಲ ಮಹಿಳೆಗೆ ಕೇಂದ್ರದಲ್ಲಿ ಹಣಕಾಸು ಸಚಿವೆಯನ್ನಾಗಿಸಿದ ಕೀರ್ತಿ ಸರಕಾರಕ್ಕೆ ಸಲ್ಲುತ್ತದೆ. ಐದುನೂರು ಜನ ಹೆಣ್ಣು ಮಕ್ಕಳಿಗೆ ವೇದವನ್ನು ಕಲಿಸಿ ವೇದಮಾತಾ ಪ್ರಶಸ್ತಿ ನೀಡಿರುವ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯ ಅನನ್ಯವಾದದ್ದು ಎಂದರು.
ಮಹಿಳೆಯರು ಸಮಾಜದಲ್ಲಿ ಏನೆಲ್ಲ ಮಾಡಬಹುದು. ಧಾರ್ಮಿಕವಾಗಿ ಮಹಿಳೆಯರನ್ನು ಬೆಳೆಸಿದ್ದೆ ಆದರೆ ಮನೆ ಸಂಸ್ಕಾರಯುತವಾಗಿರುತ್ತದೆ. ಇದಕ್ಕೆ ನಿದರ್ಶನ ಎನ್ನುವಂತೆ ಶ್ರೀಗಳು ಅದ್ಬುತ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ವೇದ ಮಾತಾ ಪ್ರಶಸ್ತಿ ನೀಡಿ ಗೌರವಿಸಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಪ್ರಕಾಶ ಬಾಗೋಜಿ ಮಾತನಾಡಿ, ಇಂದಿನ ಈ ಕಾರ್ಯಕ್ರಮ ಸಮಾಜದಲ್ಲಿರುವ ಎಲ್ಲ ಮಹಿಳೆರಿಗೆ ಮಾದರಿಯಾಗುವ ಕಾರ್ಯಕ್ರಮ. ಮಹಿಳೆಯರಿಗೆ ವೇದ, ಸಂಸ್ಕೃತ, ಜೋತಿಷ್ಯ ಕಲಿಸಿದರೆ ಖಂಡಿತವಾಗಿ ಮನೆ ನಂದ ಗೋಕುಲವಾಗುತ್ತದೆ. ಇವತ್ತು ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯವನ್ನು ಶ್ರೀಮಠ ಮಾಡುತ್ತಿದೆ ಎಂದರು.
ಪಿ.ಜಿ.ಹುಣಸ್ಯಾಳದ ನಿಜಗುಣ ದೇವರು ಮಾತನಾಡಿ, ಗುರುವಿನಲ್ಲಿ ಕರುಣೆ, ಕಾಳಜಿ ಇರಬೇಕು ಎಂದರು.
ಸಮಾರಂಭದ ಸಾನ್ನಿದ್ಯ ವಹಿಸಿದ್ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮಲ್ಲಿ ಧರ್ಮ, ಸಂಸ್ಕೃತಿ ಮರೆತು ಹೋಗುತ್ತಿರುವ ಕಾಲದಲ್ಲಿ ಮಹಿಳೆಯರು ವೇದವನ್ನು ಕಲಿತು ನಾವು ಕೂಡು ಮಹಿಳಾ ಪುರೋಹಿತರಾಗಲು ಸನ್ನದ್ದರಾಗಿದ್ದೇವೆ ಎಂದು ತಿಳಿಸುವ ಅದ್ಬುತ ಕಾರ್ಯ ಮಾಡುತ್ತಿದ್ದಾರೆ. ವೇದಮಾತೆಯರನ್ನು ತಯಾರಿಸಿದ ಕೀರ್ತಿ ಧಾರವಾಡದ ಕವಿತಾ ಹಿರೇಮಠರಿಗೆ ಸಲ್ಲುತ್ತದೆ ಎಂದರು.
ವೇದಮೂರ್ತಿ ವಿಜಯ ಶಾಸ್ತ್ರೀ, ಉದಾಸ್ತಿ ಹಿರೇಮಠ ಮಠಕ್ಕೆ ಬಂದ ಭಕ್ತರಿಗೆ ಪ್ರಸಾದ ಸೇವೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ