ಮಕ್ಕಳು ವಿದ್ಯಾವಂತರಾದಲ್ಲಿ ಸಮಾಜದ ಪ್ರಗತಿ ಕಟ್ಟಿಟ್ಟ ಬುತ್ತಿ – ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಒಂದು ಸಮಾಜದ ಮಕ್ಕಳು ವಿದ್ಯಾವಂತರಾದಲ್ಲಿ ಆ ಸಮಾಜದ ಪ್ರಗತಿ ಕಟ್ಟಿಟ್ಟ ಬುತ್ತಿ. ಅದಕ್ಕೆ ನಾನು ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ’ ಎಂದು ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ಜತ್ರಾಟವೇಸ್‌ನ ಸುಮಾರು ೫೦ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಪಕ್ಷದ ಸ್ಕಾರ್ಫ್ ಹಾಕಿ ಸ್ವಾಗತಿಸಿ ಮಾತನಾಡಿದರು. ’ಕೇವಲ ರಾಜಕಾರಣ ಮಾಡುವುದು ನಮ್ಮ ರಕ್ತದಲ್ಲಿಲ್ಲ. ಸಮಾಜಕಾರಣದೊಂದಿಗೆ ಸಮಾಜಗಳ ಅಭಿವೃದ್ಧಿ ಪಡಿಸುವುದೇ ನಮ್ಮ ಉಸಿರು. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಪಕ್ಷದ ಆಡಳಿತ ಹಾಗೂ ನಮ್ಮ ಕಾರ್ಯಗಳನ್ನು ಮೆಚ್ಚಿ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರುತ್ತಿರುವುದು ಹೆಮ್ಮೆ ಎನಿಸುತ್ತಿದೆ’ ಎಂದರು.
ಸ್ಥಳೀಯ ಢೋರ ಸಮಾಜದ ಅಧ್ಯಕ್ಷ ರೋಹಿತ ಸೋನಟಕ್ಕೆ ಮುಂದಾಳತ್ವದಲ್ಲಿ ವಿಜಯ ಲಾಖೆ, ಲಕ್ಷ್ಮಣ ಸೋನಟಕ್ಕೆ, ನೀಲಮ ಸೋನಟಕ್ಕೆ, ಅಜಯ ಸೋನಟಕ್ಕೆ, ಸಚಿನ ಪಾಟೀಲ, ಅಮಿತ ಪಾಟೀಲ, ವಿಜಯ ಸೋನಟಕ್ಕೆ, ಉಮಾ ಸೋನಟಕ್ಕೆ, ರಾಧಾ ಸೋನಟಕ್ಕೆ, ರವಿನಾ ಲಾಖೆ, ಮೊದಲಾದವರು ಸಹಿತ ಢೋರ ಸಮಾಜದ ಸುಮಾರು ೫೦ಕ್ಕೂ ಅಧಿಕ ಜನರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂದೇಶಾ, ಸದಸ್ಯ ದೀಪಕ ಪಾಟೀಲ, ಪ್ರಭಾವತಿ ಸೂರ್ಯವಂಶಿ, ಸುಜಾತಾ ಕದಮ, ಬಂಡಾ ಘೋರ್ಪಡೆ, ಪ್ರಣವ ಮಾನವಿ, ಮಹೇಶ ಸೂರ್ಯವಂಶಿ, ರವಿ ಕದಮ, ಸಂಜನಾ ಘಾಟಗೆ, ಅರುಣ ಕಾಶೀದಕರ, ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ