

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರ ಅಬ್ಬರದ ಪ್ರಚಾರ ಆರಂಭವಾಗಿದ್ದು, ಬಿಜೆಪಿ ಬೆನ್ನಲ್ಲೇ ಇದೀಗ ಕಾಂಗೆಸ್ ಕೂಡ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟಿಸಿದೆ.
ಕಾಂಗ್ರೆಸ್ ನ 40 ನಾಯಕರ ಹೆಸರನ್ನು ತಾರಾ ಪ್ರಚಾರಕರನ್ನಾಗಿ ಘೋಷಿಸಲಾಗಿದೆ. ಕೆಲ ವರ್ಷಗಳಿಂದ ರಾಜಕೀಯದಿಂದಲೇ ದೂರ ಉಳಿದಿದ್ದ ನಟಿ ರಮ್ಯಾ ಅವರಿಗೂ ಸ್ಟಾರ್ ಪ್ರಚಾರಕರ ಸ್ಥಾನ ನೀಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಶಶಿ ತರೂರ್, ರಮ್ಯಾ, ಉಮಾಶ್ರೀ, ಜಗದೀಶ್ ಶೆಟ್ಟರ್, ಸತೀಶ್ ಜಾರಕಿಹೊಳಿ, ಡಿ.ಕೆ.ಸುರೇಶ್, ವೀರಪ್ಪ ಮೊಯ್ಲಿ, ಡಾ.ಜಿ.ಪರಮೇಶ್ವರ್, ರಣದೀಪ್ ಸುರ್ಜೇವಾಲಾ, ಚಿದಂಬರಂ, ಕೆ.ಹೆಚ್.ಮುನಿಯಪ್ಪ, ಜೈರಾಮ್ ರಮೇಶ್,ರಾಮಲಿಂಗಾರೆಡ್ಡಿ, ಜಗದೀಶ ಶೆಟ್ಟರ್ ,ಕೆ.ಸಿ.ವೇಣುಗೋಪಾಲ, ಸೈಯದ್ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್, ಜಮೀರ್ ಅಹ್ಮದ್, ಹೆಚ್.ಎಂ.ರೇವಣ್ಣ, ಅಶೋಕ್ ಗೆಹ್ಲೋಟ್, ಭುಪೇಶ್ ಬಾಗೇಲ್, ಕನ್ನಯ್ಯ ಕುಮಾರ, ಉಮಾಶ್ರೀ, ಸುಧುಕೋಕಿಲಾ, ರಾಜ್ ಬಬ್ಬರ್, ಬಿ.ವಿ. ಶ್ರೀನಿವಾಸ, ರೂಪಾ ಶಶಿಧರ ಸೇರಿದಂತೆ 40 ನಾಯಕರನ್ನು ಕಾಂಗ್ರೆಸ್ ತಾರಾ ಪ್ರಚಾರಕರಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ