*ಸಿದ್ದರಾಮಯ್ಯ ಥಕತೈ, ಥಕತೈ ಅಂತಿದ್ರು; ಸೋಮಣ್ಣ ಎಂಟ್ರಿಯಿಂದ ಸೋಲಿನ ಭೀತಿ ಶುರುವಾಗಿದೆ; ಸಂಸದ ಪ್ರತಾಪ್ ಸಿಂಹ ಟಾಂಗ್*
ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು, ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ. ವರುಣಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸೋಲುವ ಭಯ ಕಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ವರುಣಾದಲ್ಲಿ ಬಂದು ಸಿದ್ದರಮಾಯ್ಯ ಥಕತೈ ಥಕತೈ ಅಂತಿದ್ರು, ಅವರ ಓಟಕ್ಕೆ ಬ್ರೇಕ್ ಹಾಕಲೆಂದೇ ನಾವು ಸಚಿವ ವಿ.ಸೋಮಣ್ಣ ಅವರನ್ನು ಸ್ಪರ್ಧಿಯಾಗಿ ನಿಲ್ಲಿಸಿದ್ದೇವೆ. ವಿ.ಸೋಮಣ್ಣ ಎಂಟ್ರಿಯಿಂದಾಗಿ ಸಿದ್ದರಾಮಯ್ಯನವರಿಗೆ ಭಯ ಶುರುವಾಗಿದೆ ಎಂದರು.
ವರುಣಾದಲ್ಲಿ ಸೋಲುವ ಭಯದಿಂದಾಗಿ ಸಿದ್ದರಾಮಯ್ಯ ಚುನಾವಣ ಅಪ್ರಚಾರಕ್ಕಾಗಿ ಮೊಮ್ಮಗನನ್ನು ಕರೆದುಕೊಂಡು ಬಂದಿದ್ದಾರೆ. ಇನ್ನೂ 18 ವರ್ಷವೂ ಆಗದ ಮೊಮ್ಮಗನನ್ನು ಕರೆದುಕೊಂಡು ಹೋಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಭಾವನಾತ್ಮಕವಾಗಿ ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಏನು ಮಾಡಿದರೂ ಸಿದ್ದರಾಮಯ್ಯನವರನ್ನು ವರುಣಾ ಕ್ಷೇತ್ರದಿಂದಲೂ ಜನರು ಮನೆಗೆ ಕಳಿಸುತ್ತಾರೆ. ಸಚಿವ ಸೋಮಣ್ಣ ಅವರನ್ನು ಗೆದ್ದೇ ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ