Kannada NewsKarnataka News

KLS GIT ವಿದ್ಯಾರ್ಥಿಗಳ ಮತ್ತೊಂದು ಸಾಧನೆ

17 ಪ್ರಾಜೆಕ್ಟ್ ಗಳಿಗೆ ಸರ್ಕಾರದಿಂದ ಸಹಾಯಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ (ಕೆಎಸ್ ಸಿಎಸ್ ಟಿ) 46 ನೆಯ ಸರಣಿಯ ವಿದ್ಯಾರ್ಥಿ ಪ್ರಾಜೆಕ್ಟ್ ಪ್ರೋಗ್ರಾಮ್ 2022-23 ಅಡಿಯಲ್ಲಿ,  ಕೆಎಲ್ಎಸ್ ಜಿಐಟಿಯ  17 ಪ್ರಾಜೆಕ್ಟ್ ಗಳಿಗೆ ಕರ್ನಾಟಕ ಸರಕಾರದಿಂದ ಸುಮಾರು 85,000 ರೂ ಗಳ ಸಹಾಯ ಧನ ದೊರಕಿದೆ.

ಸಿವಿಲ್ ವಿಭಾಗದ  ಡಾ. ನಿತೇಂದ್ರ ಪಾಲನಕರ್ ಮಾರ್ಗದರ್ಶನದಲ್ಲಿ ನೆಲದ ಹಾಸು ತಯಾರಿಕೆಯಲ್ಲಿ ಮಿಶ್ರಣ ಕಾಂಕ್ರೀಟ್ ಬಳಕೆ , ಪ್ರೊ. ಶಶಾಂಕ್ ಸಿ. ಬಂಗಿ ಮತ್ತು ಡಾ. ಎನ್.ವರದರಾಜನ್ ಮಾರ್ಗದರ್ಶನದಲ್ಲಿ ಅಂತರ್ಜಲದ ಗುಣಮಟ್ಟ ಮತ್ತು ಅದರ ಮ್ಯಾಪಿಂಗ್. ಕಂಪ್ಯೂಟರ್ ಸೈನ್ಸ್ ವಿಭಾಗದ  ಪ್ರೊ. ಎ.ಎಂ.ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಸೆಂಟಿಮೆಂಟ್ ವಿಶ್ಲೇಷಣೆ ಮತ್ತು ಕಲಿಕೆ , ಡಾ. ಪ್ರಸಾದ್ ಎಂ.ಪೂಜಾರ್ ಅವರ ಮಾರ್ಗದರ್ಶನದಲ್ಲಿ ಬ್ಲಾಕ್‌ಚೈನ್ ಆಧಾರಿತ ಮತದಾನ ವ್ಯವಸ್ಥೆ, ಪ್ರೊ. ರವಿ ಯು.ಕಲ್ಕುಂದ್ರಿ ಅವರ ಮಾರ್ಗದರ್ಶನದಲ್ಲಿ ಕೈ ಸನ್ನೆ ಆಧಾರಿತ ಸಂವಹನೆ ಮತ್ತು  ಎಲೆಕ್ಟ್ರಿಕಲ್ ವಿಭಾಗದ   ಪ್ರೊ.ರಮೇಶ್ ಜಿ ಬಿ ಮತ್ತು ಡಾ. ರವಿರಾಜ್ ಎಂ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ನಾನೋ ಟೆಕ್ನಾಲಜಿ ಆಧಾರಿತ ಸೆನ್ಸರ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.

ಅದೇ ರೀತಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರೊ. ವೈದೇಹಿ ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಸ್ಮಾರ್ಟ್ ವೆಹಿಕಲ್ ಹೆಡ್‌ಲೈಟ್ ನಿರ್ವಹಣೆ , ಡಾ.ವಿಕ್ರಾಂತ್ ಶೆಂಡೆ ಅವರ ಮಾರ್ಗದರ್ಶನದಲ್ಲಿ ರಿಮೋಟ್ ಆಧಾರಿತ ಮತದಾನ , ಡಾ.ಬಿ.ಆರ್.ಪಾಂಡುರಂಗಿ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಮಾನಿಟರಿಂಗ್ ಕಿಟ್ ಆಯ್ಕೆಯಾಗಿವೆ.

 ಇನ್ಫರ್ಮೇಷನ್ ಸೈನ್ಸ್ ವಿಭಾಗದ ಡಾ.ಎಚ್.ಎಚ್.ಕೆಂಚಣ್ಣನವರ್ ಅವರ ಮಾರ್ಗದರ್ಶನದಲ್ಲಿ ಪಾರ್ಕಿಂಗ್ ಸ್ಲಾಟ್‌ಗಳ ದೃಷ್ಟಿ ಆಧಾರಿತ ಪತ್ತೆ , ಡಾ. ಗೋವಿಂದರಾಜ್ ಮಾನೆ ಅವರ ಮಾರ್ಗದರ್ಶನದಲ್ಲಿ ಅಕಾಡೆಮಿಕ್ ಕ್ರೆಡಿಟ್ ಬ್ಯಾಂಕ್ ನಲ್ಲಿ ಬ್ಲಾಕ್ ಚೈನ್ ನ ಬಳಕೆ, ಇನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಾ.ಎಂ.ಎಂ.ನಡಕಟ್ಟಿ ಅವರ ಮಾರ್ಗದರ್ಶನದಲ್ಲಿ ಅಲ್ಯೂಮಿನಿಯಂ ಪ್ರೊಪೆಲ್ಲರ್ ಆಧಾರಿತ ಬೈಸಿಕಲ್ , ಡಾ.ಮಂಜುನಾಥ ಜಿ.ಎ ಮತ್ತು ಡಾ.ಶಿವಕುಮಾರ್ ಎಸ್ ಅವರ ಮಾರ್ಗದರ್ಶನದಲ್ಲಿ ನ್ಯಾನೊದೊಂದಿಗೆ 3D ಮುದ್ರಿತ ಪಾಲಿಮರ್ ಫಿಲ್ಲರ್ಸ್ ಕುರಿತು ಹಾಗೂ ಪ್ರೊ.  ಕೆ.ಡಿ.ಕಟ್ಟಿಮನಿ ಅವರ ಮಾರ್ಗದರ್ಶನದಲ್ಲಿ ಸೆಮಿಯಾಟೊಮ್ಯಾಟಿಕ್ ಸಾವಯವ ಗೊಬ್ಬರದ ಕಾಂಪೋಸ್ಟಿಂಗ್ ಯಂತ್ರ , ಹಾಗೆಯೇ ಎಂಬಿಎ ವಿಭಾಗದ 2 ಮತ್ತು ಎಂ ಸಿ ಎ ವಿಭಾಗದ 1 ಪ್ರಾಜೆಕ್ಟ್ ಗಳು ಆಯ್ಕೆಯಾಗಿವೆ .

ಮಹಾವಿದ್ಯಾಲಯದ 17 ಪ್ರೊಜೆಕ್ಟ್ ಗಳು  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಂದ್ರ ಬೆಳಗಾವ್ಕರ್ ಅವರು ಹೇಳಿದ್ದಾರೆ. ವಿದ್ಯಾರ್ಥಿ ಹಾಗೂ ಮಾರ್ಗದರ್ಶಕರಿಗೆ ಪಾಚಾರ್ಯರಾದ ಪ್ರೊ. ಡಿ . ಎ . ಕುಲಕರ್ಣಿ ಮತ್ತು ಡೀನ್ ಡಾ. ಶ್ವೇತಾ ಗೌಡರ್ ಅಭಿನಂದಿಸಿದ್ದಾರೆ .

For English News –

https://pragati.taskdun.com/2nd-pu-resultannuncekarnataka/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button