ಪ್ರಗತಿವಾಹಿನಿ ಸುದ್ದಿ, ಡೆಹ್ರಾಡೂನ್: ಚಾರ್ ಧಾಮ್ ಗಳಲ್ಲಿ ಒಂದಾದ ಐದನೇ ಜ್ಯೋತಿರ್ಲಿಂಗದ ಕ್ಷೇತ್ರ ಕೇದಾರನಾಥ ದೇಗುಲದ ದ್ವಾರವನ್ನು ಇಂದು ವಿಧ್ಯುಕ್ತವಾಗಿ ತೆರೆಯಲಾಗಿದೆ.
ಬೆಳಗ್ಗೆ 6.20ಕ್ಕೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇಗುಲದ ಬಾಗಿಲು ತೆರೆಯಲಾಯಿತು. ಇಡೀ ದೇಗುಲವನ್ನು ಸುಮಾರು 35 ಕ್ವಿಂಟಾಲ್ ಗೂ ಅಧಿಕ ಹೂಗಳಿಂದ ಅಲಂಕರಿಸಲಾಗಿದ್ದು 7 ಸಾವಿರಕ್ಕೂ ಹೆಚ್ಚು ಭಕ್ತರು ಅವ್ಯಾಹತವಾಗಿ ಸುರಿಯುತ್ತಿರುವ ಹಿಮದ ಮಧ್ಯೆಯೂ ದೇಗುಲ ತಲುಪಿದ್ದಾರೆ.
ಏ.29ರವರೆಗೂ ಹಿಮಪಾತವಾಗುವ ಹಿನ್ನೆಲೆಯಲ್ಲಿ ಏ.30ರವರೆಗೆ ಉತ್ತರಾಖಂಡ ಸರಕಾರ ಇಲ್ಲಿಗೆ ಆಗಮಿಸುವ ಭಕ್ತರ ಹೊಸ ನೋಂದಣಿಯನ್ನು ಸ್ಥಗಿತಗೊಳಿಸಿದೆ. ಹವಾಮಾನದ ಸ್ಥಿತಿಗತಿಗಳ ಸಂಪೂರ್ಣ ಮಾಹಿತಿ ಪಡೆದ ನಂತರವೇ ಭಕ್ತರು ಆಗಮಿಸುವಂತೆ ಸರಕಾರ ಕೋರಿದೆ.
ದೇಗುಲದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕೇದಾರನಾಥಕ್ಕೆ ಸೋಮವಾರವೇ ಭೇಟಿ ನೀಡಿ ಪರಿಶೀಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ