Latest

ಮಾರುತಿ ದೇಗುಲಕ್ಕೆ ಪುತ್ಥಳಿ ಕೊಡುಗೆ ನೀಡಿದ ಜೈ ಶ್ರೀರಾಮ ಗೆಳೆಯರ ಬಳಗ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಮಾರುತಿ ದೇವಸ್ಥಾನಕ್ಕೆ ಜೈ ಶ್ರೀರಾಮ ಗೆಳೆಯರ ಬಳಗ ಹೊಸ ಕೊಡುಗೆ ನೀಡಿದೆ.

ಬಸವ ಜಯಂತಿಯ ನಿಮಿತ್ತ ಜೈ ಶ್ರೀರಾಮ ಗೆಳೆಯರ ಬಳಗದವರು ಶ್ರೀ ರಾಮ, ಲಕ್ಷ್ಮಣ ಹಾಗೂ ಸೀತಾ ದೇವಿಯನ್ನು ಒಳಗೊಂಡಿರುವ ಪುತ್ಥಳಿ ನಿರ್ಮಿಸಿ, ದೇವಸ್ಥಾನಕ್ಕೆ ಭಕ್ತಿಪೂರ್ವಕವಾಗಿ ಅರ್ಪಣೆ ಮಾಡಿದರು.

Home add -Advt

ಈ ವೇಳೆ ಗ್ರಾಮದಲ್ಲಿ ಅದ್ದೂರಿಯಾಗಿ ದೇವರ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಗಪ್ಪ ಇಟಗಿ, ಹಿರಿಯರಾದ ಬಸಪ್ಪ ಹೊಸಮನಿ, ರಾಚಪ್ಪ ಇಟಗಿ ಶ್ರೀ ಸಿದ್ದಪ್ಪ ಗುಂಡ್ಲೂರ ಅವರ ನೇತೃತ್ವದಲ್ಲಿ ಎಲ್ಲ ಯುವಕರು ಉಪಸ್ಥಿತರಿದ್ದರು.

https://pragati.taskdun.com/ceremonially-opened-kedarnath-temple-door-today/

https://pragati.taskdun.com/karnataka-sslc-exam-evaluation-has-started/
https://pragati.taskdun.com/zero-shadow-zero-shadow-will-happen-today/

Related Articles

Back to top button