ಮೀಸಲಾತಿ ಕುರಿತು ಕಾಂಗ್ರೆಸ್ ಪಕ್ಷದ ರಂದೀಪ್ ಸುರ್ಜೆವಾಲ ಅವರ ಹೇಳಿಕೆಗೆ ಮುಖ್ಯಮಂತ್ರಿಗಳ ಪ್ರತ್ಯುತ್ತರ

*ಹೇಳಿಕೆ ಹಾಸ್ಯಾಸ್ಪದ: ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮೀಸಲಾತಿ ಕುರಿತು ಕಾಂಗ್ರೆಸ್ ಪಕ್ಷದ ರಂದೀಪ್ ಸುರ್ಜೆವಾಲ ಅವರ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. 

“ಮೊಟ್ಟ ಮೊದಲಿಗೆ, ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು,  ಕಾಂಗ್ರೆಸ್ ಪಕ್ಷದ ಶ್ರೀ ಸುರ್ಜೆವಾಲಾ  ಅಥವಾ ಕಾಂಗ್ರೆಸ್ ಪಕ್ಷ ನೀಡಿರುವ ಹೇಳಿಕೆ  ನ್ಯಾಯಾಂಗ ನಿಂದನೆ ಮತ್ತು  ಆ ಮೂಲಕ ನ್ಯಾಯ ಒದಗಿಸಲು ತಡೆಒಡ್ಡಲು ಮಾಡಿರುವ ಪ್ರಯತ್ನ ವಾಗಿದೆ. ಸಂವಿಧಾನವು ಮೀಸಲಾತಿ ಯನ್ನು ಧರ್ಮದ ಆಧಾರದ ಮೇಲೆ ನೀಡುವುದನ್ನು ಆಲೋಚಿಸಿಲ್ಲ.  ಭಾರತದ ಸಂವಿಧಾನಶಿಲ್ಪಿ, ಬಾಬಾ ಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಅವರು ಪ್ರಥಮ ತಿದ್ದುಪಡಿಯನ್ನು ಪರಿಚಯಿಸುವ ಸಂದರ್ಭದಲ್ಲಿ ಈ  ಭಾಷಣ ಮಾಡಿದ್ದಾರೆ”. 

Home add -Advt

“ನ್ಯಾಯಾಲಯದಲ್ಲಿ ಮುಚ್ಚಳಿಕೆ ನೀಡಿದ್ದು ಏಕೆ ಎಂಬ  ಹೇಳಿಕೆ ಹಾಸ್ಯಾಸ್ಪದವಾಗಿದ್ದು,  ನ್ಯಾಯಾಂಗ  ಪ್ರಕ್ರಿಯೆಗಳ ಕುರಿತಂತೆ ನಿಮಗಿರುವ ಅಪ್ರಬುದ್ಧತೆಯನ್ನು ತೋರಿಸುತ್ತದೆ. 

*ಓಲೈಕೆ ರಾಜಕಾರಣ*

ಆದರೆ ಐ.ಎನ್.ಸಿ ಕರ್ನಾಟಕ ಯಾವಾಗಲೂ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದು, ಸಾಮಾಜಿಕ ನ್ಯಾಯ ಒದಗಿಸುವುದನ್ನು ಅರ್ಥಮಾಡಿಕೊಂಡಿಲ್ಲ. 

*ನ್ಯಾಯಾಂಗ ನಿಂದನೆ*

ಸರ್ಕಾರವು, ಹಿರಿಯ ನ್ಯಾಯವಾದಿಗಳನ್ನು ನೇಮಿಸಿಕೊಂಡು ತನ್ನ ನಿಲುವನ್ನು  ಸಮರ್ಪಕವಾಗಿ ಸಮರ್ಥಿಸಿಕೊಳ್ಳುತ್ತಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ದೊರೆಯುವ ವಿಶ್ವಾಸ ನಮಗಿದೆ. ಈ ರೀತಿಯ ಹೇಳಿಕೆಗಳ ಮೂಲಕ ನ್ಯಾಯ ವ್ಯವಸ್ಥೆಯನ್ನು ಕಲುಷಿತ ಗೊಳಿಸಲು ಪ್ರಯತ್ನಿಸಿದರೆ, ಅದು ನ್ಯಾಯಾಂಗ ನಿಂದನೆಯಾಗುತ್ತದೆ” ಎಂದು  ಟ್ವೀಟ್ ಮಾಡಿದ್ದಾರೆ.

https://pragati.taskdun.com/cm-basavaraj-bommaibelagavielection-campaign/

Related Articles

Back to top button