ಶೈಕ್ಷಣಿಕ ಕ್ಷೇತ್ರದ ಬದಲಾವಣೆಗೆ ಅನುಗುಣವಾಗಿ ಶಿಕ್ಷಕರೂ ಬದಲಾಗಿ: ಡಾ. ಫಿಲಿಪ್ ಕ್ರೆಗರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅ್ಯಂಡ ರಿಸರ್ಚ್ ಹಾಗೂ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಎಲುಬು- ಕೀಲು ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ಪೆಲ್ವಿಕ್ ಎಸೆಟಾಬುಲರ ಶಸ್ತ್ರಚಿಕಿತ್ಸಕರ ಸಂಘದ 5ನೇ ರಾಷ್ಟ್ರೀಯ ಸಮಾವೇಶವನ್ನು ಅಮೇರಿಕದ ನಾಶವಿಲ್ಲೆಯ ಛಪ್ಪೆ ಮತ್ತು ಎಲಬುಕೀಲು ಇನ್ಸ್ಟಿಟ್ಯೂಟ್‌ನ ಡಾ. ಫಿಲಿಪ್ ಕ್ರೆಗರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಡಾ. ಫಿಲಿಪ್, ಇಂದು ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತಿವೆ. ಅದರಲ್ಲೂ ವೈದ್ಯವಿಜ್ಞಾನ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಶಿಕ್ಷಕರೂ ಬದಲಾಗಬೇಕು. ಯುವ ಪೀಳಿಗೆಗೆ, ವಾಸ್ತವಕ್ಕೆ ಹತ್ತಿರವಿರುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಯುವವೈದ್ಯರು ತಂತ್ರಜ್ಞಾನದ ಮೂಲಕ ಶೀಘ್ರರೋಗಪತ್ತೆ ಮಾಡಿ ಅಗತ್ಯವಿರುವ ಚಿಕಿತ್ಸೆ ನೀಡಿ, ಮುನ್ನಚ್ಚರಿಕೆ ಕ್ರಮಕೈಗೊಳ್ಳಲು ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.
ಕಾಹೆರ ಉಪಕುಲಪತಿ ಡಾ. ನಿತಿನ್ ಗಂಗಾನೆ ಮಾತನಾಡಿ, ಯುವ ರೋಗಿಗಳು, ಮುನ್ನಚ್ಚರಿಕೆ ಔಷಧದ ಅಡ್ಡ ಪರಿಣಾಮದಿಂದ ಯುಜನತೆಯ ಮೇಲೆ ಆಗುವ ತೊಂದರೆಯನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅದರಲ್ಲಿಯೂ ಬೋನ್ ನೆಕ್ರೊಸಿಸ್ ಉಂಟಾಗಿ ಹಿಪ್(ಛಪ್ಪೆ) ಬದಲಾವಣೆ ಸಾಮಾನ್ಯವಾಗಿ ಕಂಡು ಬರುತ್ತಿವೆ. ಆದ್ದರಿಂದ ಶೀಘ್ರ ರೋಗಪತ್ತೆಯಿಂದ ಅದನ್ನು ತಪ್ಪಿಸಲು ಸಾಧ್ಯವಿದೆ. ರೋಗಿಗಳಲ್ಲಿ ಖಾಯಿಲೆಯನ್ನು ತಿರಸ್ಕರಿಸುವ ಮನೋಭಾವ ಹೆಚ್ಚಾಗಿದ್ದು ಅದನ್ನು ಹೋಗಲಾಡಿಸಿ, ಅಗತ್ಯ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗುವಂತೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
5 ವಿದೇಶಿ ಹಾಗೂ 20 ದೇಶೀಯ ಅತಿಥಿ ಉಪನ್ಯಾಸಕರು ಆಗಮಿಸಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಸಮಾವೇಶದಲ್ಲಿ ಸುಮಾರು 70ಕ್ಕೂ ಅಧಿಕ ಸಂಶೋಧನಾ ವರದಿಗಳನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್ ಎಸ್ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. (ಕರ್ನಲ್) ದಯಾನಂದ, ಡಾ. ಪ್ರಣವ ಶಾ, ಡಾ. ಪ್ರದೀಪ ನೇಮಾಡೆ, ಡಾ. ರವಿ ಜತ್ತಿ ಉಪಸ್ಥಿತರಿದ್ದರು. ಡಾ. ದಿನೇಶ ಕಾಳೆ ಸ್ವಾಗತಿಸಿದರು. ಡಾ. ಸಾಹಿಲ್ ಕಾಳೆ ಹಾಗೂ ಉತ್ಕರ್ಷ ಬುರಲಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ