Latest

ಮತದಾನಕ್ಕೆ ಬಂದ ಮಹಿಳೆಗೆ ಪೊಲೀಸರ ಲಾಠಿ ಏಟು ಆರೋಪ: ಮತಗಟ್ಟೆ ಅಧಿಕಾರಿಗಳ ಜೊತೆ ಸ್ಥಳೀಯರ ವಾಗ್ವಾದ, ತಳ್ಳಾಟ

ಪ್ರಗತಿವಾಹಿನಿ ಸುದ್ದಿ, ಗದಗ: ಮತದಾನಕ್ಕೆ ಬಂದ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಮಾಡಿದ್ದಾಗಿ ಆರೋಪಿಸಿದ್ದು ಈ ಘಟನೆ ಹಲವರನ್ನು ಕೆರಳಿಸಿದೆ.

ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216ರಲ್ಲಿ ಈ ಘಟನೆ ನಡೆದಿದೆ. ಲಾಠಿಯಿಂದ ಹಲ್ಲೆ ನಡೆಸಿದ್ದಾರೆಂದು ಗ್ರಾಮಸ್ಥೆ ಹುಲಗೆಮ್ಮ ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಹಲವರು ಮತಗಟ್ಟೆಯತ್ತ ಧಾವಿಸಿ ಚುನಾವಣಾಧಿಕಾರಿಳೊಂದಿಗೆ ತೀವ್ರ ವಾಗ್ವಾದ, ತಳ್ಳಾಟ ನಡೆಸಿದ್ದಾರೆ. ಚುನಾವಣೆ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಮತಗಟ್ಟೆಗೆ ತೆರಳಿ ಜನರನ್ನು ಶಾಂತಗೊಳಿಸುತ್ತಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ.

Home add -Advt
https://pragati.taskdun.com/technical-problem-voting-process-halted-9-booths-of-belagavi-district/
https://pragati.taskdun.com/voting-in-hukkeri-and-yamakanamaradi-constituencies/
https://pragati.taskdun.com/rajya-sabha-member-eranna-kadadi-voted-in-kalloli/

Related Articles

Back to top button