Kannada NewsKarnataka NewsLatest

*ರಾಜ್ಯಾದ್ಯಂತ ಮತದಾನ ಅಂತ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಅವಧಿ ಅಂತ್ಯವಾಗಿದ್ದು, ರಾಜ್ಯದಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನ ಪ್ರಕರಿಯೆ ನಡೆದಿದೆ.

ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆವರೆಗೆ ನಡೆದಿದ್ದು, ರಾಜ್ಯದ ಎಲ್ಲಾ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನ ಮುಕ್ತಾಯವಾಗಿದೆ.

ಸಂಜೆ 5ಗಂಟೆಯವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಶೇ.50.91ರಷ್ಟು ಮತದಾನವಾಗಿದ್ದು, ಬೆಂಗಳೂರಿನ ಜನತೆ ಮತದಾನಕ್ಕೆ ನಿರಾಸಕ್ತಿ ತೋರಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಶೇ.66.37ರಷ್ಟು ಮತದಾನವಾಗಿದೆ. ಉತ್ತರ ಕನ್ನಡ ಶೇ.68.1ರಷ್ಟು ಮತದಾನ, ರಾಮನಗರದಲ್ಲಿ ಶೇ.78.28ರಷ್ಟು ಮತದಾನವಾಗಿದೆ.

https://pragati.taskdun.com/vidhanasabha-election50-91-voting/

Related Articles

Back to top button