Kannada NewsKarnataka News

ಸಚಿವೆ ಶಶಿಕಲಾ ಜೊಲ್ಲೆ ರಿಲ್ಯಾಕ್ಸ್ ಆಗಿದ್ದು ಹೇಗೆ ಗೊತ್ತೇ?


ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಸುಮಾರು ಒಂದು ತಿಂಗಳುಗಳ ಕಾಲ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದ ಸಚಿವೆ, ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಗುರುವಾರ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ತಮ್ಮ ನಿವಾಸದಲ್ಲಿ ಗೋ ಮಾತೆಗೆ ಹಾಗೂ ಇತರ ಸಾಕು ಪ್ರಾಣಿಗಳಿಗೆ ಆಹಾರ ತಿನ್ನಿಸುತ್ತ, ಗಾರ್ಡನ್ ನಲ್ಲಿರುವ ವಿವಿಧ ಬಗೆಯ ಮರಗಳನ್ನು ವೀಕ್ಷಿಸುತ್ತ ರಿಲ್ಯಾಕ್ಸ್ ಆದರು.

ಬೆಳಗ್ಗೆಯಿಂದ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆದ ಅವರು, ದೇಶದೆಲ್ಲೆಡೆ ಮೋದಿಯವರ ಸಾಧನೆ ಹಾಗೂ ಬಿಜೆಪಿ ಪಕ್ಷದೆಡೆಗೆ ಇರುವ ಮತದಾರರ ಒಲವು ಗಮನಿಸಿದರೆ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ನಿಪ್ಪಾಣಿ ಕ್ಷೇತ್ರದಲ್ಲಿ ಮತದಾರರ ಪ್ರಭುಗಳು ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಪರ ಕೆಲಸಗಳನ್ನು ಮೆಚ್ಚಿಕೊಂಡು ಮತದಾನ ಮಾಡಿ ನನ್ನ ಬೆಂಬಲಕ್ಕೆ ಸಾಥ್ ನೀಡಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಕಮಲ ಅರಳುವುದು ಗ್ಯಾರಂಟಿ ಎಂದರು.
ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿರುವ ಅಭಿವೃದ್ಧಿ ಪರ ಕೆಲಸಗಳನ್ನು ಕೈಗೆತ್ತಿಕೊಂಡು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ತಮ್ಮದಾಗಿದೆ ಎಂದರು.

https://pragati.taskdun.com/belgaum-final-details-of-assembly-constituency-wise-voting/

Home add -Advt

Related Articles

Back to top button