ಸೈಕಲ್ ಯಾತ್ರೆ ಮೂಲಕ ಕೆಎಲ್ಎಸ್ ಜಿಐಟಿಗೆ ಪದ್ಮಶ್ರೀ ಪುರಸ್ಕೃತ, ಸ್ಪಿಕ್ ಮ್ಯಾಕೆ ಸಂಸ್ಥಾಪಕ ಡಾ. ಕಿರಣ್ ಸೇಠ್ ಭೇಟಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ಪಿಕ್ ಮ್ಯಾಕೆ (ಸೊಸೈಟಿ ಫಾರ್ ದಿ ಪ್ರಮೋಷನ್ ಆಫ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಯಂಡ್ ಕಲ್ಚರ್ ಅಮಂಗ್ಸ್ಟ ಯೂಥ್) ಸಂಸ್ಥಾಪಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಎಮೆರಿಟಸ್ ಐಐಟಿ-ದೆಹಲಿ ನಿವೃತ್ತ ಪ್ರೊಫೆಸರ್, 74 ವರ್ಷ ವಯಸ್ಸಿನ ಡಾ ಕಿರಣ್ ಸೇಠ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕ್ಲಿಂಗ್ ಮಾಡುವ ಹೊಸ ಮಿಷನ್ ಅನ್ನು ಪೂರ್ಣ ಗೊಳಿಸಿದ್ದಾರೆ .
45 ವರ್ಷಗಳ ಹಿಂದೆ, 1977ರಲ್ಲಿ ಸ್ಥಾಪಿತವಾದ ಸ್ಪಿಕ್ ಮ್ಯಾಕೆ ರಾಷ್ಟ್ರವ್ಯಾಪಿ, ರಾಜಕೀಯೇತರ, ಜನರ ಆಂದೋಲನ ಮತ್ತು ನೋಂದಾಯಿತ ಸಂಘವಾಗಿದ್ದು, ಶಾಸ್ತ್ರೀಯ ಸಂಗೀತ , ಜಾನಪದ ಸಂಗೀತ ಮತ್ತು ನೃತ್ಯ, ಧ್ಯಾನ, ಯೋಗ, ಸಿನಿಮಾ ಕ್ಲಾಸಿಕ್ ಪ್ರದರ್ಶನಗಳು, ಗಣ್ಯ ವ್ಯಕ್ತಿಗಳ ಸಂವಾದಗಳು ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಭಾರತೀಯ ಪರಂಪರೆಯಲ್ಲಿ ಸಕ್ರಿಯ ಆಸಕ್ತಿಯನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಶಾಲಾ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ವಿಶಿಷ್ಟ ಕಾರ್ಯಾಗಾರಗಳನ್ನೂ ನಡೆಸಿದ ಕೀರ್ತಿಯೊಂದಿಗೆ , ಇದರ ಸ್ವಯಂಸೇವಕರು ಭಾರತ ಮತ್ತು ವಿದೇಶದ 800 ಪಟ್ಟಣಗಳಲ್ಲಿ ಪ್ರತಿ ವರ್ಷ 5000 ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ನಡೆಯಲಿದೆ.
2009 ರಲ್ಲಿ, ಡಾ ಸೇಠ್ ಅವರು ಕಲೆಗೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಪಿಕ್ ಮ್ಯಾಕೆ ಸಂಸ್ಥೆಯು, ಏನ್ಡಿಟಿವಿ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿ, ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
74ನೇ ವಯಸ್ಸಿನಲ್ಲಿ, ಡಾ ಕಿರಣ್ ಸೇಠ್ ಅವರು ಗೋವಾದಿಂದ ಪುಣೆಗೆ ಸೈಕ್ಲಿಂಗ್ ಮಾಡುತ್ತಿದ್ದು, ಮೇ 10 ಮತ್ತು 11 ರಂದು ಕರ್ನಾಟಕ-ಬೆಳಗಾವಿ ಮೂಲಕ ಹಾದು ಹೋಗಿದ್ದು, ಮಾರ್ಗ ಮಧ್ಯೆ ಗುರುವಾರ ಬೆಳಗಾವಿಯ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಭೇಟಿ ನೀಡಿದ್ದರು.
ಡಾ.ಕಿರಣ್ ಸೇಠ್ ಅವರು ಈ ಅಭಿಯಾನಕ್ಕೆ ಸಂಬಂಧಿಸಿದ ತಮ್ಮ ಉದಾತ್ತ ಉದ್ದೇಶದ ಕುರಿತು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಪ್ರತಿ ವರ್ಷ ಜನೆವರಿ 25 ಹಾಗೂ 26ರಂದು ಹಗಲು, ರಾತ್ರಿ ನಿರಂತರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಖ್ಯಾತ ಕಲಾವಿದರು ಇದರಲ್ಲಿ ಭಾಗವಹಿಸುತ್ತಾರೆ.
ಮಹಾತ್ಮ ಗಾಂಧಿಯವರ ಸಿಂಪಲ್ ಲಿವಿಂಗ್, ಹೈ ಥಿಂಕಿಂಗಿ ತತ್ತವ ಅಳವಡಿಸಿಕೊಂಡಿರುವ ಕಿರಣ್ ಸೇಠ್, ಕೇವಲ 3 ಜೊತೆ ಬಟ್ಟೆಗಳೊಂದಿಗೆ ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಸೈಕ್ಲಿಂಗ್ ಒಂದು ರೀತಿಯ ಮೆಡಿಟೇಶನ್, ಇದು ಪರಿಸರ ಸ್ನೇಹಿಯಾಗಿದ್ದು, ಪರ್ಯಾಯ ವಾಹನವನ್ನಾಗಿ ಬಳಕೆ ಮಾಡಬೇಕು ಎನ್ನುವುದು ಅವರ ಸಲಹೆ.
ಸ್ಪಿಕ್ ಮ್ಯೆ ಸ್ವಯಂ ಸೇವಕಿ ಸುಪ್ರಿತಿ ಮೊದಲಾದವರು ಇದ್ದರು,
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ