ಪ್ರಗತಿವಾಹಿನಿ ಸುದ್ದಿ, ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (LOC) ದಾಟಿದ ಅಪರಿಚಿತ ಮಹಿಳೆಯನ್ನು ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿದೆ.
ಅಪರಿಚಿತ ಮಹಿಳೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದಿದ್ದಳು ಎನ್ನಲಾಗಿದೆ. ಕಮಲ್‌ಕೋಟೆ ಪ್ರದೇಶದಲ್ಲಿ ಎಲ್‌ಒಸಿ ದಾಟಿ ಗಡಿ ಬೇಲಿಯ ಸಮೀಪ ಬರುತ್ತಿದ್ದಾಗ ಸೈನಿಕರು ಆಕೆಯನ್ನು ಪ್ರಶ್ನಿಸಿದರು. ಆದರೆ ಆಕೆ ಯಾವುದೇ ಉತ್ತರ ನೀಡದೆ ಮುನ್ನುಗ್ಗತೊಡಗಿದಾಗ ಆಕೆಗೆ ಎಚ್ಚರಿಕೆ ನೀಡಲಾಗಿದೆ. ಅದಕ್ಕೂ ಕ್ಯಾರೇ ಎನ್ನದಿದ್ದಾಗ ಗುಂಡಿನ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ