Latest

ಬೀದಿ ನಾಯಿಗಳ ದಾಳಿ; 15 ಕುರಿಗಳ ಸಾವು; 20 ಕುರಿಗಳ ಸ್ಥಿತಿ ಗಂಭೀರ

ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ತಾಲೂಕಿನ ಬಸವಾಪಟ್ಟಣದ ಬಳಿ ಕಂಸಾಗರ ಗ್ರಾಮದಲ್ಲಿ ಬೀದಿ ನಾಯಿಗಳು ಮಾಡಿ 15 ಕುರಿಗಳನ್ನು ಕೊಂದು ಹಾಕಿವೆ.

ನಾಯಿಗಳ ದಾಳಿಗೆ 20 ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ರೈತ ತಿಮ್ಮಣ್ಣ ಎಂಬುವರಿಗೆ ಸೇರಿದ ದೊಡ್ಡಿಯಲ್ಲಿ ನೂರಕ್ಕೂ ಹೆಚ್ಚು ಕುರಿಗಳಿದ್ದವು. ಮೂರರಿಂದ ನಾಲ್ಕು ಬೀದಿ ನಾಯಿಗಳು ಹಠಾತ್ತಾಗಿ ದಾಳಿ ನಡೆಸಿ ಕುರಿಗಳ ಕುತ್ತಿಗೆಗೆ ಕಚ್ಚಿ ಕೊಂದು ಹಾಕಿವೆ.

ಪಶು ವೈದ್ಯರು ಸ್ಥಳಕ್ಕಾಗಮಿಸಿ ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ನಷ್ಟಕ್ಕೀಡಾದ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

https://pragati.taskdun.com/karnatakas-notorious-cyber-fraud-arrested/
https://pragati.taskdun.com/balachandra-jarakiholi-announced-the-prize/
https://pragati.taskdun.com/a-woman-who-infiltrated-the-border-was-shot-by-the-army/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button