Latest

*ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, ಮಾಧ್ಯಮಗಳ ಮೇಲೆ ಗರಂ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕರ್ನಾಟಕ ನೂತನ ಸಿಎಂ ಆಯ್ಕೆ ವಿಚಾರ ಕಗ್ಗಂಟಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರು ನಾಯಕರು ಬಿಗಿ ಪಟ್ಟು ಹಿಡಿದಿದ್ದು, ಹಗ್ಗಜಗ್ಗಾಟ ಮುಂದುವರೆದಿದೆ.

ಈ ನಡುವೆ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಡಿಕೆ.ಶಿವಕುಮಾರ್, ಸಿಎಂ ಆಯ್ಕೆ ವಿಚಾರವಾಗಿ ಚರ್ಚೆ ನಡೆಸಿದರು. ಖರ್ಗೆ ನಿವಾಸದಿಂದ ಹೊರ ಬಂದ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಯಾವುದೇ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು.

ನಡೆದ ಚರ್ಚೆಯಾದರೂ ಏನು? ಒಂದು ಪ್ರತಿಕ್ರಿಯೆ ನೀಡುವಂತೆ ಸುದ್ದಿಗಾರರು ಒತ್ತಾಯಿಸುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನಾನು ನೀಡಲ್ಲ, ನೀವು ಬರಿ ಬೋಗಸ್ ಸುದ್ದಿ ಹಾಕುತ್ತಿದ್ದೀರಾ. ಯಾವುದೂ ನಿಜವಲ್ಲ….ಯಾರೋ ಹೇಳಿದ ಸುದ್ದಿಯನ್ನು ಹಾಕಿ ಗಾಸಿಪ್ ಕ್ರಿಯೇಟ್ ಮಾಡುತ್ತಿದ್ದೀರಾ. ಎಲ್ಲವೂ ಸುಳ್ಳು ಎಂದು ಗರಂ ಆದರು.

https://pragati.taskdun.com/d-k-shivakumarsiddharamaiahcm-post/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button