ಪ್ರಗತಿವಾಹಿನಿ ಸುದ್ದಿ, ಮುಂಬಯಿ: ಸಿಎಸ್ಕೆ ಬ್ಯಾಟರ್ ಅಂಬಟಿ ರಾಯುಡು ಘೋಷಿಸಿದ್ದಾರೆ.
ಇಂದಿನ ಫೈನಲ್ ತನ್ನ ಕೊನೆಯ ಐಪಿಎಲ್ ಪಂದ್ಯ ಎಂದು ಹೇಳಿರುವ ಅವರು ಜಿಟಿ ವಿರುದ್ಧ ಇಂದಿನ ಐಪಿಎಲ್ 2023 ರ ಫೈನಲ್ ನಂತರ ಐಪಿಎಲ್ನಿಂದ ನಿವೃತ್ತಿ ಹೊಂದುವುದಾಗಿ ತಿಳಿಸಿದ್ದಾರೆ.
“ಇದೊಂದು ಸುದೀರ್ಘ ಪಯಣವೇ ಆಗಿದೆ. ನಾನು ಈ ಶ್ರೇಷ್ಠ ಪಂದ್ಯಾವಳಿಯನ್ನು ಆಡುವುದನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಯು-ಟರ್ನ್ ಇಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಯುಡು ಐಪಿಎಲ್ 2018 ರಿಂದ ಸಿಎಸ್ಕೆಯಲ್ಲಿದ್ದಾರೆ. ಅವರು 2010 ರಿಂದ 2017 ರವರೆಗೆ ಎಂಐಗಾಗಿ ಆಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ