ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ತನ್ನ ಪೂರ್ವಾನುಮತಿ ಪಡೆಯದೇ ತನ್ನ ಬಗ್ಗೆ ವೆಬ್ ಸೀರೀಸ್ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗ್ಯಾಂಗ್ ಸ್ಟರ್ ಛೋಟಾ ರಾಜನ್ @ರಾಜೇಂದ್ರ ನಿಕಾಲ್ಜೆ ತಡೆಯಾಜ್ಞೆ ಕೋರಿ ಗುರುವಾರ ಬಾಂಬೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಛೋಟಾ ರಾಜನ್ ಸ್ಟೋರಿ ಆಧರಿತ ವೆಬ್ ಸರಣಿ ‘ಸ್ಕೂಪ್’ ಜೂನ್ 2 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಇದಕ್ಕೆ ತಡೆಯಾಜ್ಞೆ ನೀಡಬೇಕಲ್ಲದೆ, ಟ್ರೇಲರ್ನ್ನು ಸಹ ತೆಗೆದುಹಾಕಲು ನ್ಯಾಯಾಲಯ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಹೊಸದಿಲ್ಲಿಯ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್, ತನ್ನ ಪೂರ್ವಾನುಮತಿ ಪಡೆಯದೆ ತನ್ನ ವ್ಯಕ್ತಿತ್ವದ ಬಗ್ಗೆ ಬರೆಯುವುದು ಅಥವಾ ಚಲನಚಿತ್ರ ಮಾಡುವುದು ಅಥವಾ ದುರ್ಬಳಕೆ ಮಾಡುವುದು ತನ್ನ ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆ ಮತ್ತು ಮಾನನಷ್ಟವಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಈಗಾಗಲೇ ಟ್ರೇಲರ್ ಪ್ರಸಾರ ಮಾಡುವ ಮೂಲಕ ವೆಬ್ ಸರಣಿಯ ತಯಾರಕರು ಗಳಿಸಿದ 1 ಕೋಟಿ ರೂ. ತಮಗೆ ನೀಡಬೇಕು ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.
https://pragati.taskdun.com/man-stands-naked-on-table-at-vatican-church-to-protest-ukraine-war/
https://pragati.taskdun.com/a-woman-sat-late-at-night-at-the-police-station-with-her-four-year-old-child-for-justice/
https://pragati.taskdun.com/extension-of-restraining-order-in-dcm-d-k-shivakumars-disproportionate-assets-case/
https://pragati.taskdun.com/gold-and-silver-prices-decreased-today/
https://pragati.taskdun.com/honble-chief-minister-bommais-letter-to-siddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ