Kannada NewsKarnataka News

ಬೆಳಗಾವಿ: 2000 ರೂ. ನೋಟು ಬದಲಾಯಿಸಿಕೊಡುವುದಾಗಿ ವಂಚಿಸಿದ ಕಾನಸ್ಟೆಬಲ್ ಸೇರಿ ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  500 ರೂ ಮುಖಬೆಲೆಯ 5 ಲಕ್ಷ ರೂ. ನೀಡಿದರೆ 2000 ರೂ. ಮುಖ ಬೆಲೆಯ 6 ಲಕ್ಷ ರೂ. ನೀಡುವುದಾಗಿ ಹೇಳಿ ವಂಚಿಸಿದ ಮೀರಜ್ ಠಾಣೆ ಪೊಲೀಸ್ ಕಾನಸ್ಟೆಬಲ್ ಸೇರಿ ಮೂವರನ್ನು ಕಾಗವಾಡ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಪ್ರಮುಖ ಆರೋಪಿ ಹುಡುಕಾಟ ನಡೆಸಲಾಗುತ್ತಿದೆ.

ಮೀರಜ್ ನ ಸಮೀರ್ ಬೋಸ್ಲೆ ಎನ್ನುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕಾಗವಾಡ ಠಾಣೆ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಅವರ ಬಳಿ ಇದ್ದ 500 ರೂ. ಮುಖಬೆಲೆಯ ಚಿಲ್ಡ್ರ್ನನ್ಸ್ ಬ್ಯಾಂಕ್ ನೋಟುಗಳ ಬಂಡಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Home add -Advt

ಅಸ್ಲಂ ಮತ್ತು ಜಾಧವ ಎಂದು ತಮ್ಮನ್ನು ಪರಿಚಯಿಸಿಕೊಂಡ ವ್ಯಕ್ತಿಯಗಳು ಅಥಣಿ ತಾಲೂಕಿನ ಮಂಗಸೂಳಿ ದೇವಸ್ಥಾನದ ಬಳಿ ಕರೆಸಿಕೊಂಡು ತಮ್ಮಿಂದ 5 ಲಕ್ಷ ರೂ. ಪಡೆದು ನಂತರ ಪೊಲೀಸರು ಬಂದರೆಂದು ಹೇಳಿ ಓಡಿ ಹೋಗಿ ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.

ಈ ಕುರಿತು ತಕ್ಷಣ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಾಗಿ ಶೋಧ ನಡೆದಿದ್ದು, ತನಿಖೆ ಮುಂದುವರಿದಿದೆ.

 

ವಿವರ:

FIR ಮತ್ತು ದೂರಿನ ಪ್ರತಿ ಇಲ್ಲಿದೆ:

https://mail.google.com/mail/u/0?ui=2&ik=8ea932610f&attid=0.1&permmsgid=msg-a:r3700979899494327887&th=1887b2c734728447&view=att&disp=inline&realattid=1887b2c43bec9e7d6181

 

https://pragati.taskdun.com/gangster-chhota-rajan-moved-court-against-scoop-web-series/

Related Articles

Back to top button