ಕಾಂಗ್ರೆಸ್ ಗ್ಯಾರಂಟಿಯಿಂದ ಬಿಜೆಪಿ ವಿಚಲಿತ, ಬಿಜೆಪಿಯವರಿಗೆ ಇನ್ನು ಹೋರಾಟ, ಹೋರಾಟ, ಗೆಲ್ಲುವವರೆಗೂ ಹೋರಾಟ – ಸತೀಶ್ ಜಾರಕಿಹೊಳಿ ವ್ಯಂಗ್ಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ಯಾರಂಟಿ ಯೋಜನೆಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ಜನರ ಕಲ್ಯಾಣಕ್ಕಾಗಿ ಸರಕಾರ ನೀಡುತ್ತಿದೆ. ಇದು ಬಿಜೆಪಿಗೆ ದೊಡ್ಡ ಶಾಕ್ ಆಗಿದೆ. ನಮ್ಮ ಗ್ಯಾರಂಟಿಯಿಂದ ಬೇರೆ ಕಡೆ ಕರ್ನಾಟಕ ಮಾದರಿ ಜಾರಿಗೆ ಬರುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಯಿಂದ ವಿಚಲಿತರಾಗಿದ್ದಾರೆ. ಈ ವಿಷಯನ್ನು ಮರೆ ಮಾಚಲು ಬೇರೆ ಅಸ್ತ್ರ ಹೂಡುತ್ತಾರೆ. ಅದೇನು ಹೊಸತಲ್ಲ. ಹದಿನೈದು ದಿನದಲ್ಲಿ ಫಲಿತಾಂಶ ಮರೆಸಿ ಗ್ಯಾರಂಟಿ, ಗ್ಯಾರಂಟಿ ಎಂದು ಹಿಡಿದು ಕುಳಿತದರು. ಗ್ಯಾರಂಟಿ ನೀಡಿದ್ದೇವೆ. ಮತ್ತೆ ಬೇರೆ ಮಾರ್ಗ ಹಿಡಿಯುತ್ತಾರೆ ಎಂದರು.
ಜನಪರವಾದ ಬಿಜೆಪಿ ಸರಕಾರದ ಅವಧಿಯಲ್ಲಿದ್ದ ಯೋಜನೆಯನ್ನು ಮುಂದುವರಿಸುತ್ತೇವೆ. ತಮ್ಮ ಸ್ವಾರ್ಥಕ್ಕಾಗಿ ಯೋಜನೆ ಮಾಡಿದ್ದರೆ ಮುಲಾಜಿಲ್ಲದೆ ಬಂದ್ ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
2013ರ ಸಿದ್ದರಾಮಯ್ಯ ನೇತೃತ್ವದ ಸರಕಾರದ ಯೋಜನೆಗಳು ಬೆಳಗಾವಿ ನಗರದಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ಈಗ ನಮ್ಮ ಸರಕಾರದಿಂದಲೇ ಆ ಯೋಜನೆಗಳನ್ನು ಉದ್ಘಾಟನೆ ಮಾಡುತ್ತೇವೆ ಎಂದರು.
ಬೆಳಗಾವಿಗೆ ಬರಬೇಕಿದ್ದ ಯೋಜನೆಗಳು ಹುಬ್ಬಳ್ಳಿ -ಧಾರವಾಡಕ್ಕೆ ಹೋಗುತ್ತಿವೆ ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು, ನಮ್ಮ ಎಲ್ಲ ವಿಮಾನಗಳು ಹುಬ್ಬಳ್ಳಿಗೆ ಹೋಗಿವೆ. ದೆಹಲಿಗೆ ಸಾಕಷ್ಟು ಜನ ಪ್ರಯಾಣ ಬೆಳೆಸುತ್ತಿದ್ದರು. ಬೆಳಗಾವಿಯಲ್ಲಿದ್ದ ಬಿಜೆಪಿಯ ಮಂತ್ರಿಯೊಬ್ಬರು ವಿಮಾನ ಹುಬ್ಬಳ್ಳಿಗೆ ಹೋಗಲು ಕಾರಣರಾಗಿದ್ದಾರೆ. ಬೆಳಗಾವಿಗೆ ಇನ್ನೂ ಹೆಚ್ಚಿನ ವಿಮಾನ ತರುವ ಪ್ರಯತ್ನ ಮಾಡಲಾಗುವುದು, ಶೀಘ್ರದಲ್ಲಿಯೇ ಸಭೆ ಕರೆಯಲಾಗುವುದು ಎಂದರು.
ಎಮ್ಮೆ, ಕೋಣ ಕಡಿಯುವುದಾದರೆ ಹಸು ಏಕೆ ಕಡಿಯಬಾರದು ಎಂದು ಪಶುಸಂಗೋಪನಾ ಇಲಾಖೆಯ ಸಚಿವ ವೆಂಕಟೇಶ ಅವರ ಹೇಳಿಕೆಯನ್ನು ದೊಡ್ಡ ಅಸ್ತ್ರವಾಗಿಸಿಕೊಂಡಿದೆ ಬಿಜೆಪಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಇನ್ನು ಐದು ವರ್ಷ ಏನೂ ಕೆಲಸ ಇಲ್ಲ. ಬಿಜೆಪಿಯವರು ಬೋರ್ಡ್ ಬರೆದು ಇಡಬೇಕು ಇನ್ನು ಹೋರಾಟ. ಹೋರಾಟ, ಗೆಲ್ಲುವವರೆಗೂ ಹೋರಾಟ ಅಂತ. ಅವರ ಕೆಲಸ ಇದನ್ನೆ ಮಾಡಿದ್ದಾರೆ ಅವರು, ಅಭಿವೃದ್ಧಿಯ ವಿಷಯ ಗೊತ್ತೆ ಇಲ್ಲ ಅವರಿಗೆ. ಕೇವಲ ಕೋಮು, ದ್ವೇಷ ಹರಡಿಸುವುದು, ಗಲಾಟೆ, ಒಬ್ಬರನ್ನೊಬ್ಬರು ಎತ್ತಿ ಕಟ್ಟುವುದು ಇಷ್ಟೆ ಅವರ ಕೆಲಸ. ಯಾರೇ ಹೇಳಿಕೆ ನೀಡಿದರೂ ಸದನದಲ್ಲಿ ಚರ್ಚೆಗೆ ಅವಕಾಶ ಇದೆ. ಸಚಿವ ವೆಂಕಟೇಶ ಅವರ ಹೇಳಿಕೆಗೆ ಚರ್ಚೆಗೆ ಅವಕಾಶ ಇದೆ. ಸಾಧಕ, ಬಾಧಕ ನೋಡಿ ನಿರ್ಣಯವಾಗುತ್ತದೆ. ಅವರೇನೋ ಹೇಳಿದರೆಂದು ಬಿಜೆಪಿಯವರು ಖಾಲಿ ಇದ್ದಾರೆ. ತಕ್ಷಣ ಏಳಲು ಆಗುವುದಿಲ್ಲ. ಅವರು ಸೋತಿದ್ದಾರೆ. ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ. ಅವರ ಸರಕಾರದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಅವರಿಗೆ, ಯಾರೇ ಏನಂದರೂ ಗುರಿಯಾಗಿಟ್ಟುಕೊಂಡು ವಿರೋಧ ಮಾಡುವುದು ಸರಿಯಲ್ಲ. ಯಾವುದೇ ವಿಚಾರ ಇದ್ದರೂ ಸದನದಲ್ಲಿ ಚರ್ಚೆ ಮಾಡಬೇಕೆಂದರು.
ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತ ದೇಶದಲ್ಲಿಯೇ ದೊಡ್ಡ ದುರಂತ. ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಬಹುದು. ಹೋದ ಜೀವ ಮರಳಿ ಬರುವುದಿಲ್ಲ. ಕೇಂದ್ರ ಸರಕಾರ ಇನ್ನಷ್ಟು ಹೆಚ್ಚಿನ ಅನುದಾನ ಘೋಷಣೆ ಮಾಡಿದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂದರು.
ಅನ್ನ ಭಾಗ್ಯ, ಯುವನಿಧಿ ಗ್ಯಾರಂಟಿ ಆದೇಶ : ಯಾವ ಯಾವ ಷರತ್ತು ಹಾಕಲಾಗಿದೆ ಗೊತ್ತೇ?
https://pragati.taskdun.com/anna-bhagya-youva-nidhi-guarantee-order-do-you-know-what-conditions-have-been-imposed/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ