ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ನಾಯಕರ ಎಚ್ಚರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಇನ್ನು ಐದು ವರ್ಷಗಳ ಕಾಲ ಬಿಜೆಪಿಯವರದ್ದು ಹೋರಾಟವೇ ಎಂದು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಬಿಜೆಪಿಯವರಿಗೆ ಇನ್ನೇನು ಕೆಲಸ? ಇನ್ನು ಐದು ವರ್ಷಗಳ ಕಾಲ ಅವರದ್ದು ಹೋರಾಟವೇ. ಹೋರಾಟ ಹೋರಾಟ ಗೆಲ್ಲುವವರೆಗೂ ಹೋರಾಟ ಎಂದು ಇನ್ನು ಬೋರ್ಡ್ ಬರೆದಿಡಬೇಕು. ಇನ್ನು ಐದು ವರ್ಷ ಅವರಿಗೆ ಕೆಲಸವಿಲ್ಲ ಎಂದರು.
ಕೋಮುದ್ವೇಷ ಹರಡುವುದು, ಗಲಾಟೆ, ಒಬ್ಬರ ವಿರುದ್ಧ ಒಬ್ಬರನ್ನು ಎತ್ತಿಕಟ್ಟೋದು ಇಷ್ಟೇ ಬಿಜೆಪಿ ನಾಯಕರಿಗೆ ಗೊತ್ತಿರುವುದು. ಗೋಹಯೆ ನಿಷೇಧ ಕಾಯ್ದೆ ವಿಚಾರವಾಗಿ ಸರ್ಕಾರ ಯೋಗ್ಯ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಿದರು.
https://pragati.taskdun.com/basavaraj-bommaireactionminister-venkatesh/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ