Latest

*ಮೂರು ಲಾರಿಗಳು ಡಿಕ್ಕಿ; ಪಾದಚಾರಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ; ಕಲಾದಗಿ: 3 ಲಾರಿಗಳು ಡಿಕ್ಕಿಯಾಗಿ ಭೀಕರ ಅಪಘಾತದಲ್ಲಿ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಬಸ್ ನಿಲ್ದಾಣದ ಬಳಿ ನಡೆದಿದೆ.

ದಶರಥ ಜೋಗಿನ (52) ಮೃತ ವ್ಯಕ್ತಿ. ಗದ್ದನಕೇರಿ ಕ್ರಾಸ್ ನಿಂದ ಲೋಕಾಪುರ ಕಡೆಗೆ ಹೊರಟಿದ್ದ ಲಾರಿಗಳು ರಸ್ತೆಬದಿ ನಿಲ್ಲಿಸಿದ್ದ ಮತ್ತೊಂದು ಲಾರಿಗೆ ಒಂದರ ಹಿಂದೆ ಮತ್ತೊಂದರಂತೆ ಮೂರು ಲಾರಿಗಳು ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಕೆಳಗೆ ಬಿದ್ದಿದ್ದ ಪಾದಚಾರಿ ದಶರಥ ಜೋಗಿನ ಎಂಬುವವರ ಮೇಲೆಯೇ ಲಾರಿ ಹರಿದು ಹೋಗಿದೆ. ವ್ಯಕ್ತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

https://pragati.taskdun.com/bjp8-workersfir-filemla-kariyamma-nayak/

Related Articles

Back to top button