Latest

ಬಿಪೊರ್ ಜಾಯ್ ಅಬ್ಬರದ ಮಧ್ಯೆಯೇ 707 ಶಿಶುಗಳ ಜನನ

ಪ್ರಗತಿವಾಹಿನಿ ಸುದ್ದಿ, ಅಹಮದಾಬಾದ್: ಅರಬ್ಬೀ ಸಮುದ್ರದಲ್ಲಿ ಎದ್ದ ಬಿಪೊರ್ ಜಾಯ್ ಚಂಡಮಾರುತ ಗುರುವಾರ ಗುಜರಾತ್ ಕಡಲ ತೀರಕ್ಕೆ ಅಪ್ಪಳಿಸಿದೆ. ಒಂದೂ ಮಾನವ ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸಿ ಅಲ್ಲಿನ ಸರಕಾರ ದಾಖಲೆ ನಿರ್ಮಿಸಿದೆ. ಏತನ್ಮಧ್ಯೆ 707 ಶಿಶುಗಳ ಜನನವಾಗಿದ್ದು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದರಿಂದ ತಾಯಿ- ಶಿಶುಗಳು ಕ್ಷೇಮವಾಗಿರುವ ವಿಷಯವೂ ಬೆಳಕಿಗೆ ಬಂದಿದೆ.

ಈ ಮಧ್ಯೆ 4,600 ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್‌ನ ಕರಾವಳಿ ಪ್ರದೇಶಗಳಿಂದ ಲಕ್ಷಕ್ಕೂ ಹೆಚ್ಚು ಜನರ ಪೈಕಿ 1,171 ಗರ್ಭಿಣಿಯರಿದ್ದರು. ಇವರಲ್ಲಿ 1,152 ಮಂದಿಯನ್ನು ಸರ್ಕಾರ ಸ್ಥಳಾಂತರಿಸಿತ್ತು. ಅವರಲ್ಲಿ 707 ಮಹಿಳೆಯರು ಹೆರಿಗೆಗೆ ಹೋಗಿ ಶಿಶುಗಳಿಗೆ ಜನ್ಮ ನೀಡಿದ್ದಾರೆ ಎಂದು ಗುಜರಾತ್ ಸರಕಾರ ತಿಳಿಸಿದೆ.

ಮಾಂಡವಿಯ ಸಿವಿಲ್ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರ ಸ್ಥಿತಿ ತೀರ ಜಟಿಲವಾಗಿತ್ತು. ಆಸ್ಪತ್ರೆಯ ಸ್ತ್ರೀರೋಗ ತಜ್ಞರ ಉಪಚಾರದ ಮಧ್ಯೆ ಈ ಮಹಿಳೆ ಸಿಜೇರಿಯನ್ ಇಲ್ಲದೆ ಸಹಜ ಹೆರಿಗೆಯಾಗಿರುವುದಾಗಿಯೂ ಸರಕಾರ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button