Latest

*ತುಂಗಾ ನದಿಯಲ್ಲಿ ಘೋರ ದುರಂತ; ಈಜಲು ಹೋಗಿದ್ದ ಇಬ್ಬರು ಉಪನ್ಯಾಸಕರು ಸಾವು*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಈಜಲು ತುಂಗಾ ನದಿಗೆ ಇಳಿದಿದ್ದ ಇಬ್ಬರು ಉಪನ್ಯಾಸಕರು ಸಾವನ್ನಪ್ಪಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

Home add -Advt

ನಿಟ್ಟೆ ಕಾಲೇಜಿನ ಉಪನ್ಯಾಸಕರಾಗಿರುವ 38 ವರ್ಷದ ಪುನೀತ್ ಹಾಗೂ 36 ವರ್ಷದ ಬಾಲಾಜಿ ಮೃತರು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜು ಉಪನ್ಯಾಸಕರಾಗಿರುವ ಇಬ್ಬರೂ ನಿನ್ನೆ ಪ್ರವಾಸಕ್ಕಾಗಿ ತೀರ್ಥಹಳ್ಳಿಗೆ ಬಂದು ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು.

ತುಂಗಾ ನದಿಯಲ್ಲಿ ಈಜಲೆಂದು ನದಿಗೆ ಇಳಿದಿದ್ದಾಗ ದುರಂತ ಸಂಭವಿಸಿದ್ದು, ಉಪನ್ಯಾಸಕರಿಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button