ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಯರಗಟ್ಟಿ ಬಳಿಯ ಹಲಕಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ವಣ್ಣೂರು ಗ್ರಾಮದ ರಮೇಶ ಗುಂಜಿ (24) ಕೊಲೆಯಾದ ಯುವಕ. ಈತ ಎರಡು ತಿಂಗಳುಗಳಿಂದ ವಿವಾಹಿತ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ವಿಷಯ ತಿಳಿದು ಕುಪಿತನಾದ ಮಹಿಳೆಯ ಪತಿ ಯಲ್ಲಪ್ಪ ಕಸೊಳ್ಳಿ ಇಂದು ಬೆಳಗ್ಗೆ ರಮೇಶನ ತಲೆಯ ಮೇಲೆ ಕಲ್ಲು ಹೇರಿ ಕೊಲೆಗೈದಿದ್ದಾಗಿ ಆರೋಪಿಸಲಾಗಿದೆ.
ಅನೈತಿಕ ಸಂಬಂಧ ಹೊಂದಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ವ್ಯಾಜ್ಯವಾಗಿ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಈ ವೇಳೆ ರಮೇಶ ಆರೋಪಿಗೆ 2 ಲಕ್ಷ ರೂ. ದಂಡ ಕೂಡ ನೀಡಿದ್ದ ಎನ್ನಲಾಗಿದೆ.
ಯಲ್ಲಪ್ಪನೊಂದಿಗೆ ಸೇರಿಕೊಂಡು ಆತನ ಪತ್ನಿ ರಮೇಶನ ಕೊಲೆಗೈದಿದ್ದಾಗಿ ಆರೋಪಿಸಿ ರಮೇಶ ಕುಟುಂಬದವರು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ