*ಅನ್ನಭಾಗ್ಯ ಅಕ್ಕಿ ಹಣ ಅಬಕಾರಿ ಇಲಾಖೆಗೆ ಹೋಗುತ್ತೆ; ಅಕ್ಕಿ ಹಣ ಪಡೆದವ ಮನೆಗೆ ಹೋಗ್ತಾನೋ ಇನ್ನೆಲ್ಲಿಗೆ ಹೋಗ್ತಾನೋ; HDK ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ವಿಶೇಷತೆ ಏನೂ ಇಲ್ಲ, ದುಡಿಯುವ ಕೈಗಳಿಗೆ ಸ್ವಾಮಿಮಾನಿ ಬದುಕು ಕಟ್ಟಿಕೊಳ್ಳಲು ಯಾವ ಯೋಜನೆ ಘೋಷಣೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಗ್ಯಾರಂಟಿ ಯೋಜನೆ ಬಿಟ್ತು ಬೇರಾವುದಕ್ಕೂ ಸರ್ಕಾರ ಅನುದಾನ ಮೀಸಲಿಟ್ಟಿಲ್ಲ. ನಿಮ್ಮ ಗ್ಯಾರಂಟಿಗಳಿಗೆ ನಮ್ಮದೇನೂ ಅಭ್ಯಂತರವಿಲ್ಲ. ಇನ್ನೂ ಎರಡು ಗ್ಯಾರಮ್ಟಿಗಳನ್ನು ಕೊಡಿ. ನಮ್ಮ ತಕರಾರಿಲ್ಲ, ಗ್ಯಾರಂಟಿಗಳಿಗೆವರ್ಷಕ್ಕೆ 50-60 ಸಾವಿರ ಕೋಟಿ ವೆಚ್ಚವಾಗಲಿದೆ ಎಂದರು. ಅನ್ನಭಾಗ್ಯ ಅಕ್ಕಿಗಾಗಿ ಹಣ ಕೊಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ನೀಡುವ ಹಣ ಅಬಕಾರಿ ಇಲಾಖೆಗೆ ಹೋಗುತ್ತೆ. ಆ ಅನ್ನಭಾಗ್ಯದ ಹಣ ಪಡೆದವನು ಮನೆಗೆ ಹೋಗ್ತಾನೋ ಇನ್ನೆಲ್ಲಿಗೆ ಹೋಗ್ತಾನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇದು ಕೇಂದ್ರ ಹಾಗೂ ಹಿಂದಿನ ಸರ್ಕಾರವನ್ನು ದೂಷಿಸುವ ಬಜೆಟ್. ಒಂದು ವರ್ಷಕ್ಕೆ ಜನರ ಮೇಲೆ 85,000 ಕೋಟಿ ಸಾಲ ಹೊರಿಸುತ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ