*ಅನಂತನಾಗ ಬಳಿ ಸಿಲುಕಿರುವ ಬೆಳಗಾವಿಯ 35 ಅಮರನಾಥ ಯಾತ್ರಿಗಳು; ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ ಮಾಜಿ ಶಾಸಕ ಅನಿಲ ಬೆನಕೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಉತ್ತರ ಭಾರತದಲ್ಲಿ ವರುಣಾರ್ಭಟಕ್ಕೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಮರನಾಥ ಯಾತ್ರೆಗೆ ತೆರಳಿ ವಾಪಸ್ ಆಗುತ್ತಿದ್ದ ಕನ್ನಡಿಗರು ಜಮ್ಮು-ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ಬೆಳಗಾವಿಯ 35 ಶಿವ ಭಕ್ತರು ಇದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿಯಿಂದ ತೆರಳಿರುವ 35 ಯಾತ್ರಿಕರು, ಅಮರನಾಥ ಯಾತ್ರೆ ಮುಗಿಸಿ ವಾಪಸ್ಸಾಗುವ ವೇಳೆ ಶ್ರೀನಗರ ಮತ್ತು ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅನಂತನಾಗ ಬಳಿ ಸಿಲುಕಿದ್ದು, ಎಲ್ಲಾ ಯಾತ್ರಿಕರು ಸುರಕ್ಷಿತವಾಗಿದ್ದಾರೆ. 3 ದಿನಗಳ ಕಾಲ ಭಾರತೀಯ ಸೇನೆಯ ಬಿ.ಎಸ್.ಎಪ್ ಬೆಸ್ ಕ್ಯಾಂಪ್ ನಲ್ಲಿ ರಕ್ಷಣೆಯನ್ನು ಪಡೆದುಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬೆಳಗಾವಿ ಉತ್ತರ ಮತಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆ ಯಾತ್ರಿಗಳಿಗೆ ದೂರವಾಣಿ ಕರೆ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಬೆಳಗಾವಿಯ 25 ಪುರುಷರು ಮತ್ತು 10 ಮಹಿಳೆಯರು ಇರುವುದಾಗಿ ತಿಳಿಸಿದ್ದಾರೆ. ಈ ವೇಳೆ ಅನಿಲ್ ಬೆನಕೆ ಅಗತ್ಯವಿದ್ದರೆ ಆರ್ಥಿಕ ಸಹಾಯವನ್ನು ಮಾಡುವುದಾಗಿ ತಿಳಿಸಿದ್ದು, ಯಾವುದೇ ತೊಂದರೆಗಳಿದ್ದರೆ ಸಂಪರ್ಕಿಸುವಂತೆ ಮತ್ತು ಸುರಕ್ಷಿತವಾಗಿ ಮರಳುವಂತೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಮರನಾಥ ಯಾತ್ರಿಗಳು ಬಿ.ಎಸ್.ಎಫ್ ಸೈನಿಕರು 3 ದಿನಗಳ ಕಾಲ ಉಟೋಪಚಾರ ಮಾಡಿ ಆಶ್ರಯ ನೀಡಿದ್ದು ನಾವು ಇಲ್ಲಿ ಸುರಕ್ಷತವಾಗಿರುವುದಾಗಿ ತಿಳಿಸಿದ್ದು, ಭಾರತೀಯ ಸೈನ್ಯಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇಲ್ಲಿನ ಪ್ರಶಾಸನವು ಯಾವಾಗ ಮರಳುವಂತೆ ತಿಳಿಸುತ್ತಾರೆ ಅಂದು ನಾವು ಮರಳಿ ಬೆಳಗಾವಿಗೆ ಬರುವುದಾಗಿ ಯಾತ್ರಿಗಳಾದ ಸೋಮನಾಥ ಹಲಗೇಕರ, ಸಂತೋಷ ದಿವಟೆ, ರುತುರಾಜ ಬೀಡಿಕರ, ಪರಶುರಾಮ ಬರಡೆ, ನಿತೀನ ಆನಂದಾಚೆ, ವಿನಾಯಕ ಪಾಟೀಲ, ನಂದು ಗುರವ, ಆದೇಶ ಪಾಟೀಲ, ರೇಣುಕಾ ಬಿಡೀಕರ, ಶ್ವೇತಾ ಹಲಗೇಕರ, ಶ್ರದ್ದಾ ಬಡಮಂಜಿ ಹಾಗೂ ಇತರ ಯಾತ್ರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ