Kannada NewsKarnataka NewsLatest
*BREAKING: ಇಸ್ರೋ ಮಾಜಿ ಅಧ್ಯಕ್ಷ ದಾ.ಕಸ್ತೂರಿ ರಂಗನ್ ಗೆ ಲಘು ಹೃದಯಾಘಾತ*

ಪ್ರಗತಿವಾಹಿನಿ ಸುದ್ದಿ;
ಬೆಂಗಳೂರು: ಇಸ್ರೋ ಮಾಜಿ ಅಧ್ಯಕ್ಷ ದಾ.ಕಸ್ತೂರಿ ರಂಗನ್ ಅವರಿಗೆ ಲಘು ಹೃದಯಾಘಾತವಾಗಿದೆ.
ಕೊಲಂಬೊದಲ್ಲಿರುವ ಡಾ.ಕಸ್ತೂರಿ ರಂಗನ್ ಅವರಿಗೆ ಲಘು ಹೃದಯಾಘಾತವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಲಂಬೊದಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುತ್ತಿದೆ.
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಡಾ.ಕಸ್ತೂರಿ ರಂಗನ್ ಅವರಿಗೆ ಚಿಕಿತ್ಸೆ ನೀಡಲು ಅವರನ್ನು ಏರ್ ಲಿಫ್ಟ್ ಮಾಡಲಾಗುತ್ತಿದ್ದು, ಇಂದು ಸಂಜೆ 5:30ಕ್ಕೆ ಹೆಚ್ ಎ ಎಲ್ ಏರ್ ಪೋರ್ಟ್ ಗೆ ಕಸ್ತೂರಿ ರಂಗನ್ ಆಗಮಿಸಲಿದ್ದಾರೆ. ಅಲ್ಲಿಂದ ಝೀರೋ ಟ್ರಾಫಿಕ್ ಮೂಲಕ ನಾರಾಯಣ ಹೃದಯಾಲಯಕ್ಕೆ ಅವರನ್ನು ಶಿಫ್ಟ್ ಮಾಡಲಾಗುತ್ತಿದೆ.




